ಹುಲಸೂರಿನಲ್ಲಿ ಹುಚ್ಚು ನಾಯಿ ದಾಳಿ: 9 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಹುಲಸೂರು: ಪಟ್ಟಣದ ಪಶು ಆಸ್ಪತ್ರೆ ಸಮೀಪ ಹಾಗೂ ತೇರು ಮೈದಾನದ ಸುತ್ತಮುತ್ತ ರವಿವಾರ ಹುಚ್ಚು ನಾಯಿಯೊಂದು ದಾಳಿ ನಡೆಸಿ ಒಂಬತ್ತು ಮಂದಿಗೆ ಕಚ್ಚಿರುವ ಘಟನೆ ನಡೆದಿದೆ.
ನಾಯಿ ಕಡಿತದಿಂದ ಗಾಯಗೊಂಡ ರಾಜಕುಮಾರ್ ಗೋಪನೆ, ವೆಂಕಟರಾವ್ ಚವ್ಹಾಣ್, ಮಹೇಶ್ ಮೇಹಕರ್, ಬಸವರಾಜ್ ಗಾಯಕವಾಡ್ ಸೇರಿದಂತೆ ಗಾಯಾಳುಗಳು ಹುಲಸೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದಲ್ಲಿ ಹುಚ್ಚು ನಾಯಿಯ ದಾಳಿಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಮಕ್ಕಳು ಹಾಗೂ ವೃದ್ಧರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಾಯಿಯನ್ನು ಹಿಡಿದು ಸ್ಥಳಾಂತರಿಸುವುದರ ಜೊತೆಗೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Next Story




