ಪ್ರತಾಪುರ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ; ದೂರು

ಬೀದರ್ : ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ದಯಾನಂದ್ ಚಂದ್ರಪ್ಪ ಬೆಲೂರೆ ಆರೋಪಿಸಿದ್ದಾರೆ.
ಪ್ರತಾಪುರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರಾಜಪ್ಪ ಬೆಲೂರೆ ಅವರ ಮನೆಯಿಂದ ಶಿವಶರಣಪ್ಪ ಬೆಲೂರೆ ಅವರ ಮನೆವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಹೆಸರಿನಲ್ಲಿ 66,261 ರೂ. ಕೂಲಿ ಕಾಮಗಾರಿ ಬಿಲ್ಲು ಪಡೆಯಲಾಗಿದೆ. ಆದರೆ ಅಲ್ಲಿ ಯಾವುದೇ ರೀತಿಯ ಕಾಮಗಾರಿ ಆಗಿರುವುದಿಲ್ಲ ಎಂದು ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಸಲ್ಲಿಸಿದ ದೂರಿನಲ್ಲಿ ದೂರಿದ್ದಾರೆ.
ರಾಜಪ್ಪ ಬೆಲೂರೆ ಅವರ ಮನೆಯಿಂದ ಶಿವಶರಣಪ್ಪ ಬೆಲೂರೆ ಅವರ ಮನೆವರೆಗೆ ಕೇವಲ 20 ಮೀಟರ್ ನಷ್ಟೇ ಅಂತರವಿರುತ್ತದೆ. ಆದರೆ ಅದಕ್ಕೆ 3 ಲಕ್ಷ ರೂ. ಅನುದಾನವಿಟ್ಟು ನಕಲಿ ಬಿಲ್ಲು ಸೃಷ್ಟಿಸಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Next Story





