ಬೀದರ್| ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ

ಬೀದರ್ : ಒಂಟಿಗುಡಸಿ ತಾಂಡಾದ ವ್ಯಕ್ತಿಯೊಬ್ಬರು ಕಾಣೆಯಾಗಿದ್ದು, ಅವರ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಬೇಮಳಖೇಡಾ ಪೊಲೀಸ್ ಠಾಣೆಯ ಅರಕ್ಷಕ ಉಪ ನಿರೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂಟಿಗುಡಸಿ ತಾಂಡಾದ ನಿವಾಸಿ ಕಿಶನ್ ಲಕ್ಷ್ಮಣ್ ರಾಠೋಡ್ (50) ಎಂಬ ವ್ಯಕ್ತಿ ಜೂ.7 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಾಣೆಯಾದ ವ್ಯಕ್ತಿಯು 5. 2 ಅಡಿ ಎತ್ತರವಿದ್ದು, ದುಂಡುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದಾರೆ. ಕಾಣೆಯಾದ ಸಮಯದಲ್ಲಿ ಒಂದು ಕೆಂಪು ಬಣ್ಣದ ಲುಂಗಿ ಮತ್ತು ಒಂದು ಬಿಳಿ ಬಣ್ಣದ ಶರ್ಟ ಧರಿಸಿದ್ದಾರೆ. ಇವರು ಕನ್ನಡ, ತೆಲುಗು, ಹಿಂದಿ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಕಂಟ್ರೋಲ್ ರೂಂ ಬೀದರ್ ದೂರವಾಣಿ ಸಂಖ್ಯೆ: 08482-226704, ಪೊಲೀಸ ನೀರಿಕ್ಷಕರು ಚಿಟಗುಪ್ಪಾ ವೃತ್ತ ಮೊಬೈಲ್ ಸಂಖ್ಯೆ: 94808 03434, ಪೊಲೀಸ್ ಉಪನಿರೀಕ್ಷಕರು ಬೇಮಳಖೇಡಾ ಠಾಣೆ ಮೊಬೈಲ್ ಸಂಖ್ಯೆ: 94808 03454, ಬೇಮಳಖೇಡಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08482-200449 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.





