ವಿಷ ಕಾರುವ ಫ್ಯಾಕ್ಟರಿಗಳ ಜೊತೆ ಶಾಸಕರಿಂದ ಒಳ ಒಪ್ಪಂದ : ಡಾ. ಚಂದ್ರಶೇಖರ್ ಪಾಟೀಲ್ ಆರೋಪ

ಹುಮನಾಬಾದ್ : ಶಾಸಕ ಸಿದ್ದು ಪಾಟೀಲ್ ಚುನಾವಣೆಯಲ್ಲಿ ಗೆದ್ದು ಬಂದರೆ ಇಲ್ಲಿನ ಕ್ಯಾಮಿಕಲ್ ಫ್ಯಾಕ್ಟರಿಗಳು ಬಂದ್ ಮಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಅವರು ಫ್ಯಾಕ್ಟರಿಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಮೌನವಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ್ ಆರೋಪಿಸಿದರು.
ಇಂದು ಚಿಟಗುಪ್ಪಾ ಪಟ್ಟಣದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ಚಂದ್ರಶೇಖರ್ ಪಾಟೀಲ್, ಈ ಕಾರ್ಯಕ್ರಮಗಳಲ್ಲಿ ಜನ ಸೇರಿರುವುದು ನೋಡಿದರೆ ನಾವು ವಿಧಾನಸಭೆ ಚುನಾವಣೆಯಲ್ಲಿ ಸೋತಿಲ್ಲ ಎಂದು ಅನಿಸುತ್ತಿದೆ. ರಾಜಶೇಖರ್ ಪಾಟೀಲ್ ಅವರ ಅಭಿವೃದ್ಧಿ ಕೈಗನ್ನಡಿಯಾಗಿದೆ. ಅವರು ಹುಮನಾಬಾದ್ ಮಾದರಿ ತಾಲೂಕು ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಪರಿವಾದವನೇ ಮೋಸ ಮಾಡಿ ಶಾಸಕನಾಗಿದ್ದು ಆಗಿದೆ. ಮುಳ್ಳನ್ನ ಒಂದು ಸಾರಿ ತೆಗೆದು ಬಿಟ್ಟಾಕಿದ್ದೇವೆ. ಈಗ ಕಾರ್ಯಕರ್ತರು ಒಂದಾಗಬೇಕು. ತಮ್ಮ ವೈಯಕ್ತಿಕ ಜಗಳಕ್ಕೆ ಪಕ್ಷಕ್ಕೆ ಹಾನಿ ಮಾಡಬೇಡಿ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಗಿದಂತೆ ಕಾರ್ಯಕರ್ತರ ವೈಮನಸ್ಸಿನಲ್ಲಿ ರಾಜಶೇಖರ್ ಪಾಟೀಲ್ ಬಡವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅರ್ಧ ಪಿರಿಯಡ್ ಮುಗಿಯುತ್ತಾ ಬರ್ತಾ ಇದೆ. ಇಲ್ಲಿನ ಅಭಿವೃದ್ಧಿ ನೋಡಿದರೆ ಶೂನ್ಯವಾಗಿದೆ ಎಂದು ಹೇಳಿದರು.
ಐದು ಗ್ಯಾರಂಟಿ ಯೋಜನೆ ಭಾರತದಲ್ಲೇ ಇತಿಹಾಸ ನಿರ್ಮಿಸಿದೆ. ಬೇರೆ ರಾಜ್ಯದವರು ನಮ್ಮ ಗ್ಯಾರಂಟಿಗಳೇ ಕಾಪಿ ಮಾಡುತ್ತಿದ್ದಾರೆ. ಬಹಳಷ್ಟು ಸೌಲಭ್ಯ ಈ ಗ್ಯಾರಂಟಿ ಯೋಜನೆಗಳಿಂದಾಗಿದೆ. ಇದೆಲ್ಲ ನಾವು ಜನರಿಗೆ ಮುಟ್ಟಿಸಬೇಕು. ಹಿಂದೆ ಸೋತಿರುವ ತಪ್ಪುಗಳು ಬಿಟ್ಟು, ಹಿಂದಿನ ಚುನಾವಣೆಗೆ ಮೀರಿಸಿ ಮುಂದೆ ಇದೆ ಪಟ್ಟಣದಿಂದ ನಮ್ಮ ಲೀಡ್ ಹೆಚ್ಚಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಮಸ್ಯೆ ಇದ್ದರೆ ಎಲ್ಲರೂ ಸೇರಿ ಬಗೆ ಹರಿಸೋಣ. ಕಾರ್ಯಕರ್ತರು ವೈ ಮನಸ್ಸು ಮಾಡಿಕೊಳ್ಳಬಾರದು. ಯಾರು ಯಾರಗಿಂತಲೂ ದೊಡ್ಡವರಿಲ್ಲ. ಇಂದಿನ ಸಭೆ ನಂತರ ಎಲ್ಲರು ಒಗ್ಗೂಡಿ ಬಲಿಷ್ಠರಾಗೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಅಫ್ಸರ್ ಮಿಯಾ, ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣ ಪಾಟೀಲ್, ಯುವ ಮುಖಂಡ ಅಭಿಷೇಕ್ ಪಾಟೀಲ್, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಜಮಗಿ, ಗ್ರಾಮೀಣ ಅಧ್ಯಕ್ಷ ಓಂಕಾರ್ ತುಂಬಾ, ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಾಹಿಲ್ ಖಿಲ್ಜಿ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.







