ಬೀದರ್ ನಲ್ಲಿ ಮುಂಗಾರು ಮಳೆಯ ಚುರುಕು :ರೈತರಲ್ಲಿ ಖುಷಿ

ಬೀದರ್ : ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಸೋಮವಾರದಿಂದ ಮೋಡ ಮುಸುಕಿದ ವಾತಾವರಣದ ಜೊತೆಗೆ ಮಳೆ ಸುರಿಯುತ್ತಿದೆ.
ಈ ಮಳೆಯಿಂದಾಗಿ ಭೂಮಿಯಲ್ಲಿ ಸಂಪೂರ್ಣವಾಗಿ ನೀರು ಇಂಗಿದ್ದು, ಬಿತ್ತುವುದಕ್ಕೆ ರೈತರು ಭರ್ಜರಿ ತಯಾರಿ ನಡೆಸಿದ್ದಾರೆ. ಈಗಾಗಲೇ ಜಿಲ್ಲೆಯ ಎಲ್ಲ ಕಡೆಗೆ ಬಿತ್ತಣಿಕೆ ಮಾಡುವುದಕ್ಕೆ ಬೀಜ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲೆಯ ರೈತರು ಖುಷಿಯಲ್ಲಿದ್ದಾರೆ.
ಜೂ.12 ಮತ್ತು 13 ರವರೆಗೆ ಬಿರುಸಿನ ಮಳೆಯಾಗಲಿದ್ದು, ರೈತರು ಇದಕ್ಕಿಂತ ಮುಂಚಿತವಾಗಿ ಬಿತ್ತಣಿಕೆ ಮಾಡಬಾರದು. ಜೂ.13 ರ ನಂತರ ಮಳೆಯ ಪ್ರಮಾಣ ನೋಡಿ ರೈತರು ಬಿತ್ತಣಿಕೆ ಮಾಡಬಹುದು. ಜೂ.15 ರಿಂದ ಜು.15 ರವರಿಗೆ ಬಿತ್ತಣಿಕೆ ಮಾಡಿದರೂ ಸಹ ಇಳುವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ ರೈತರು ಬಿತ್ತಣಿಕೆಗೆ ಅವಸರ ಮಾಡಬಾರದು ಎಂದು ಭಾಲ್ಕಿಯ ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.
Next Story