ಬೀದರ್-ಬೆಂಗಳೂರು ವಿಶೇಷ ರೈಲಿಗೆ ಸಂಸದ ಸಾಗರ್ ಖಂಡ್ರೆ ಚಾಲನೆ

ಬೀದರ್ : ಅ.5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಬೀದರ್ ಲೋಕಸಭಾ ಕ್ಷೇತ್ರದಿಂದ ಬಸವ ಭಕ್ತರಿಗೆ ತೆರಳಲು ಸಂಸದ ಸಾಗರ್ ಖಂಡ್ರೆ ಅವರು ವಿಶೇಷ ರೈಲು ಸೇವೆಯ ವ್ಯವಸ್ಥೆಯನ್ನು ಮಾಡಿದ್ದರು. ಆ ರೈಲ್ವೆಗೆ ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆಯನ್ನು ನೀಡಿ, ಬಸವ ಭಕ್ತರ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಬಸವ ಸಂಸ್ಕೃತಿ ಅಭಿಯಾನವು ಗುರು ಬಸವಣ್ಣನವರ ಜನ್ಮ ಸ್ಥಳ ಬಸವನ ಬಾಗೇವಾಡಿಯಿಂದ ಪ್ರಾರಂಭವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ, ಅ.5 ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಬಸವಣ್ಣ ನವರ ಕರ್ಮ ಭೂಮಿಯಾಗಿರುವ ನಮ್ಮ ಬೀದರ್ ಲೋಕಸಭಾ ಕ್ಷೇತ್ರದಿಂದ ಸಾವಿರಾರು ಬಸವ ಭಕ್ತರು ಆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾಗಾಗಿ ನಮ್ಮ ಜನರ ಅರಾಮದಾಯಕ ಪ್ರಯಾಣಕ್ಕೋಸ್ಕರ ನಾನು ವಿಶೇಷ ರೈಲು ಸೇವೆಯನ್ನು ಮಾಡಿ ಇಂದು ಅದಕ್ಕೆ ಚಾಲನೆಯನ್ನು ನೀಡಿದ್ದೆನೆ ಎಂದು ತಿಳಿಸಿದರು.
ಸಮಾರಂಭ ಮುಗಿದ ಮೇಲೆ ಬಸವ ಭಕ್ತರು ಇದೇ ರೈಲ್ವೆ ಮೂಲಕ ಬೆಂಗಳೂರಿನಿಂದ ಬೀದರ್ ಗೆ ಬರಬಹುದು. ರೈಲ್ವೆ ಸಂಖ್ಯೆ : 07064, ಸ್ಥಳ ಬೆಂಗಳೂರು-ಬೀದರ್ ಹೊರಡುವ ದಿನಾಂಕ ಹಾಗೂ ಸಮಯ: 5ನೇ ಅಕ್ಟೋಬರ್ 2025 ರಾತ್ರಿ 10:30 ಗಂಟೆಯಾಗಿದೆ. ಅ. 6ರ ಮಧ್ಯಾಹ್ನ 2:40 ಗಂಟೆಗೆ ರೈಲ್ವೆ ಬೀದರ್ ಗೆ ತಲುಪುತ್ತದೆ ಎಂದು ಮಾಹಿತಿ ನೀಡಲಾಗಿದೆ.





