ಬೀದರ್‌ನ ಮುಹಮ್ಮದ್ ಮಜೀದ್ ಬಿಲಾಲ್ ಅವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ ಪ್ರಧಾನ

ಬೀದರ್ : ನಗರದ ಹ್ಯೂಮ್ಯಾನಿಟಿ ಫಸ್ಟ್ ಫೌಂಡೇಷನ್ ನ ಅಧ್ಯಕ್ಷ ಮುಹಮ್ಮದ್ ಮಜೀದ್ ಬಿಲಾಲ್ ಅವರಿಗೆ ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕರ್ನಾಟಕ ಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಜೀದ್ ಬಿಲಾಲ್ ಅವರಿಗೆ ಸಮಾಜ ಸೇವೆಗಾಗಿ ಕರ್ನಾಟಕ ಮೀಡಿಯಾ ಕ್ಲಬ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಕರ್ನಾಟಕ ಭೂಷಣ ಪ್ರಶಸ್ತಿಯನ್ನು ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಡಾ.ಬಸವ ರಮಾನಂದ್ ಸ್ವಾಮೀಜಿ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸೇರಿದಂತೆ ಇತರರು ಇದ್ದರು.
Next Story





