ಬೀದರ್ ನಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರ ಧ್ವಜ : ಪ್ರಕರಣ ದಾಖಲು

ಬೀದರ್ : ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ವಿಮೋಚನಾ ದಿನದ ಅಂಗವಾಗಿ ಹಾರಿಸಲಾಗುತ್ತಿದ್ದ ರಾಷ್ಟ್ರ ಧ್ವಜವು ತಲೆ ಕೆಳಗಾಗಿ ಹಾರಿರುವ ಘಟನೆ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದ್ದು, ಪ್ರಕಾಶ್ ಹೊಕ್ರಾಣ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೆ. 17 ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ನಗರದ ಸವಿತಾ ಸಮಾಜದ ಭವನದ ಮೇಲೆ ರಾಷ್ಟ್ರಧ್ವಜ ತಲೆ ಕೆಳಗಾಗಿ ಹಾರಿಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿತ್ತು.
ಈ ಘಟನೆ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
Next Story





