ಬೀದರ್ | ಉತ್ಪಾದಕ ಸಂಸ್ಥೆಗಳನ್ನು ಬಲಗೊಳಿಸಲು ಅಗತ್ಯ ಸಹಾಯ ಒದಗಿಸಲಾಗುವುದು : ಸಿಇಓ ಡಾ.ಗಿರೀಶ ಬದೋಲೆ

ಬೀದರ್ : ಜಿಲ್ಲೆಯ ಹಲಬರ್ಗಾ ಗ್ರಾಮ ಪಂಚಾಯತಿಯ ಜನಶ್ರೀ ಮಹಿಳಾ ರೈತ ಉತ್ಪಾದಕರ ಕಂಪನಿಯು ಮೊಟ್ಟ ಮೊದಲಿಗೆ ಬೀಜ ಹಾಗೂ ರಸಗೊಬ್ಬರ ಪರವಾನಿಗೆ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಉತ್ಪಾದಕ ಸಂಸ್ಥೆಗಳು ಬಲಗೊಳಿಸಲು ಅಗತ್ಯ ಸಹಾಯ ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಹಲಬರ್ಗಾ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ʼಜನಶ್ರೀ ಮಹಿಳಾ ರೈತ ಉತ್ಪಾದಕರ ಕಂಪನಿಯʼ ಉದ್ಘಾಟನಾ ಸಮಾರಂಭದಲ್ಲಿ ಬೀಜ ಹಾಗೂ ರಸಗೊಬ್ಬರವನ್ನು ಕಂಪನಿಯ ಶೇರುದಾರಿಗೆ ವಿತರಿಸಿ ಅವರು ಮಾತನಾಡಿದರು.
ಹಲಬರ್ಗಾ ರಾಚೋಟೇಶ್ವರ್ ಮಠದ ಹಾವಗಿಲಿಂಗೇಶ್ವರ್ ಶಿವಾಚಾರ್ಯರು ಮಾತನಾಡಿ, ಸ್ವಸಹಾಯ ಸಂಘದ ಮಹಿಳೆಯರನ್ನು ಒಗ್ಗೂಡಿಸುವ ಮೂಲಕ ಕಂಪನಿ ಸ್ಥಾಪನೆ ಮಾಡಿದ್ದು, ರೈತ ಮಹಿಳೆಯರು ಬೆಳೆಗಳನ್ನು ಬೆಳೆದು, ಬೆಳೆಗಳ ಸಂಸ್ಕರಣೆ ಹಾಗೂ ಮಾರಾಟ ಮಾಡುವಲ್ಲಿ ಸಂಘದ ಮಹಿಳೆಯರು ಸ್ವಯಂ ಉದ್ಯೋಗ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಡಿಆರ್‌ಡಿಎ ಯೋಜನಾ ನಿರ್ದೇಶಕರು, ಭಾಲ್ಕಿ ಕಾರ್ಯನಿರ್ವಾಹಕ ಅಧಿಕಾರಿಗಳು, ಹಲಬರ್ಗಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎನ್‌ಆರ್‌ಎಲ್‌ಎಮ್ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಿಬ್ಬಂದಿ ಸೇರಿದಂತೆ ಕಂಪನಿಯ ಶೇರುದಾರರು ಮತ್ತು ಇತರರು ಉಪಸ್ಥಿತರಿದ್ದರು.







