ಅ.18 ರಂದು ಬೀದರ್ ನ ವಿವಿಧೆಡೆ ವಿದ್ಯುತ್ ವ್ಯತ್ಯಯ

ಬೀದರ್: ಜೆಸ್ಕಾಂ ಬೀದರ್ ವಿಭಾಗದಲ್ಲಿ ಬರುವ 11ಕೆವಿ ಗುಂಪಾ ಮತ್ತು 11ಕೆವಿ ಮೈಲೂರು ಫೀಡರ್ ಗಳ ಮೇಲೆ ಹಾಗೂ 11ಕೆವಿ ಅಮಲಾಪೂರ್ ಫೀಡರ್ ಗಳ ಮೇಲೆ ಕಾಮಗಾರಿ ಹಾಗೂ ತುರ್ತು ನಿರ್ವಹಣೆ ಕೆಲಸದ ನಿಮಿತ್ಯ ಅ.18 ರಂದು ಬೆಳಿಗ್ಗೆ 10 ರಿಂದ 4 ಗಂಟೆ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದಾಗಿ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಉಪ ವಿಭಾಗದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11ಕೆವಿ ಗುಂಪಾ ಮತ್ತು 11ಕೆವಿ ಮೈಲೂರು ಫೀಡರ್ ಗಳ ವಿವರ: ಸಂಗಮೇಶ್ವರ್ ಕಾಲೋನಿ, ವಿದ್ಯಾನಗರ ಕಾಲೋನಿ, ಬಿದ್ರಿ ಕಾಲೋನಿ, ಹಕ್ಕ ಕಾಲೋನಿ, ಟೀಚರ್ ಕಾಲೋನಿ, ವಡ್ಡರ್ ಕಾಲೋನಿ, ಮೈಲೂರು, ಗಾಂಧಿ ನಗರ, ಸಾಯಿ ನಗರ್, ಹಾಸಿಮಿ ಕಾಲೋನಿ, ಸಿ ಎಮ್ ಸಿ ಲೇಔಟ್, ಗುಂಪಾ, ಚಿಟ್ಟಾಕ್ರಾಸ್, ಅಲ್ಲಮ ಪ್ರಭು ನಗರ, ಲಕ್ಷ್ಮಿ ನಗರ, ಗುಂಪಾ ರಿಂಗ್‌ರೋಡ್, ಕೈಲಾಸನಗರ, ಹಳೇ ಕುಂಬರವಾಡಾ, ಶಿವಾಜಿ ನಗರ, ಕೋಡೆ ಲೇಔಟ್, ಶಾಸ್ತ್ರೀ ನಗರ ಹಾಗೂ ಓಂ ನಗರ.
11ಕೆವಿ ಅಮಲಾಪೂರ ಫೀಡರ್ ಗಳ ವಿವರ: ಚಿದ್ರಿ ಐಪಿ ಏರಿಯಾ, ಮೈಲೂರು ಐಪಿ ಏರಿಯಾ, ಅಮಲಾಪೂರ್ ಐಪಿ ಏರಿಯಾ ಹಾಗೂ ಚಿಟ್ಟಾವಾಡಿ ಐಪಿ ಏರಿಯಾ ಇಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.





