ಪ್ರವಾದಿ ಮುಹಮ್ಮದ್ ಅವರ ಸಂದೇಶ ಇಡೀ ಮಾನವ ಕುಲಕ್ಕೆ ಅನ್ವಯ: ಮೌಲಾನಾ ಇಯಾಝ್ ಸಾಹೇಬ್

ಹುಮನಾಬಾದ್: ಪ್ರವಾದಿ ಮುಹಮ್ಮದ್ ಅವರ ಸಂದೇಶ ಬರೀ ಮುಸಲ್ಮಾನರಿಗಷ್ಟೇ ಅಲ್ಲ ಇಡೀ ಮಾನವ ಕುಲಕ್ಕೆ ಅನ್ವಯವಾಗುತ್ತವೆ ಎಂದು ಮುಂಬೈ ನ ಮೌಲಾನಾ ಇಯಾಝ್ ಸಾಹೇಬ್ ಅವರು ಹೇಳಿದರು.
ತಾಲೂಕಿನ ದುಬಲಗುಂಡಿ ಗ್ರಾಮದ ಮದನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಮೀಲಾದುನ್ನೆಬಿ ಪ್ರಯುಕ್ತ ರವಿವಾರ ರಾತ್ರಿ ನಡೆದ ಸೀರತ್-ಎ-ನಬಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರವಾದಿ ಮುಹಮ್ಮದ್ ಅವರು ಇಡೀ ಮಾನವ ಕೂಲಕ್ಕೆ ಶಾಂತಿಧೂತರಾಗಿ ಬಂದಿದ್ದರು. ಅವರು ಶಾಂತಿಯ ಸಂಕೇತವಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಪ್ರವಾದಿ ಅವರ ಜೀವನದ ಕುರಿತು ಅವರ ಸರಳತೆ ಮನೋಭಾವನೆ ಹಾಗೂ ಸಮಾನತೆಯ ಸಂದೇಶ ಕುರಿತು ಭಾಷಣ ಮಾಡಿದರು. ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಧರಿಸಿ ಗಮನ ಸೆಳೆದರು.
ಮೂರುವರೆ ವರ್ಷದ ಮಗು ಸೈಯದ್ ತೈಯಬ್ ಅಲಿ ನಮಾಝ್ ನಿರ್ವಹಿಸುವ ಮಾಡುವ ಮೂಲಕ ಗಮನ ಸೆಳೆದನು.
ಈ ಕಾರ್ಯಕ್ರಮದಲ್ಲಿ ಮುಫ್ತಿ ತೌಸೀಫ್ ಖಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮೌಲಾನಾ ಇಯಾಜ್ ಸಾಹೇಬ್, ಮೌಲಾನಾ ಸಲೀಮ್, ಖಾರಿ ತೈಯ್ಯಿಬ್, ಮುಫ್ತಿ ಅಸ್ಲಾಂ, ಮುಫ್ತಿ ರಿಹಾನ್, ಶಾಲೆಯ ಉಪಾಧ್ಯಕ್ಷ ಹಾಫಿಜ್ ಆಸೀಫ್ ಮೌಲಾನಾ, ಕಾರ್ಯದರ್ಶಿ ಶಾದುಲ್ಲಾ ಖಾನ್, ಪ್ರಮುಖರಾದ ಕರೀಂ ಮೌಲಾನಾ, ಅಕ್ಬರ್ ಮಾಸುಲ್ದಾರ್, ಸೈಯದ್ ಜಹಾಂಗೀರ್ ಹಾಗೂ ಹಿರಿಯರಾದ ಬಾಲೆಷಾ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.






