ಬೀದರ್: ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ್ ಸ್ವಾಮಿಯನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ

ಬೀದರ್: ಮಹಾರಾಷ್ಟ್ರದ ಕೋಲ್ಹಾಪುರ್ ಜಿಲ್ಲೆಯ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ್ ಶ್ರೀಗಳನ್ನು ಬಂಧಿಸುವಂತೆ ಒತ್ತಾಯಿಸಿ ಬಸವಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಪ್ರತಿಭಟನೆ ನಡೆಸಲಾಯಿತು.
ಇಂದು ಅಂಬೇಡ್ಕರ್ ವೃತ್ತದಲ್ಲಿ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ್ ಶ್ರೀಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಬಸವರಾಜ್ ಧನ್ನೂರ್ ಅವರು ಮಾತನಾಡಿ, ಕನ್ನೇರಿ ಶ್ರೀಗಳನ್ನು ಬಿಜಾಪುರಕ್ಕೆ ನಿಷೇಧ ಹೇರಿದರೆ ಸಾಲದು, ಅವರನ್ನು ಇಡೀ ಕರ್ನಾಟಕಕ್ಕೆ ನಿಷೇಧ ಹಾಕಬೇಕು. ಯಾಕೆಂದರೆ ಅವರು ಸಾಂಸ್ಕೃತಿಕ ನಾಯಕ ಬಸವಣ್ಣ, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಹಾಗೂ ಬಸವ ಅನುಯಾಯಿಗಳನ್ನು ಅವಮಾನಿಸಿದ್ದಾರೆ. ಹೀಗಾಗಿ ಅವರು ಕರ್ನಾಟಕದ ನೆಲದ ಮೇಲೆ ಕಾಲಿಡದ ಹಾಗೆ ಸರ್ಕಾರ ಅವರಿಗೆ ಸಂಪೂರ್ಣವಾಗಿ ನಿಷೇಧ ಹಾಕಬೇಕು ಎಂದು ಆಗ್ರಹಿಸಿದರು.
ಬಸವರಾಜ್ ಬುಳ್ಳಾ ಅವರು ಮಾತನಾಡಿ, ಕಾಡಸಿದ್ದೇಶ್ವರ್ ಮಠವು ಮೂಲತಃ ಬಸವ ಧರ್ಮದ ಪೀಠವಾಗಿದೆ. ಅಂಥ ಸ್ವಾಮಿ ಇವತ್ತು ದೇಶದ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿ ಸಿಕ್ಕು, ಹುಚ್ಚರ ಹಾಗೆ ಶ್ರೇಷ್ಠ ಶರಣ ಧರ್ಮದ ವಿರುದ್ಧ ಮಾತನಾಡುತಿದ್ದಾನೆ. ಇಬ್ಬರನ್ನು ಹೊಡೆಯುತ್ತೇನೆ ಎಂದು ಹೇಳಿದ್ದಾನೆ. ಹಾಗಾಗಿ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೋಮಶೇಖರ್ ಪಾಟೀಲ್, ಸಂಜುಕುಮಾರ್ ಪಾಟೀಲ್, ಕುಶಾಲರಾವ್ ಪಾಟೀಲ್, ವಿರಶೇಟ್ಟಿ ಪಾಟೀಲ್, ಶ್ರೀಕಾಂತ್ ಸ್ವಾಮಿ, ರವಿ ಪಾಪಡೆ ಹಾಗೂ ಸಿದ್ರಾಮ್ ಶೇಟಕಾರ್ ಸೇರಿದಂತೆ ಅನೇಕರು ಇದ್ದರು.







