ಬೀದರ್ ನಲ್ಲಿ ಮಳೆ | ರೈತರಿಗೆ ಹೆಚ್ಚಿದ ಆತಂಕ

ಬೀದರ್ : ಜಿಲ್ಲಾದ್ಯಂತ ಬುಧವಾರದಿಂದ ಮತ್ತೆ ಮಳೆ ಶುರುವಾಗಿದ್ದು, ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಬೀದರ್, ಬಸವಕಲ್ಯಾಣ, ಹುಮನಾಬಾದ್, ಔರಾದ್ ಹಾಗೂ ಭಾಲ್ಕಿ ಸೇರಿದಂತೆ ಎಲ್ಲ ತಾಲ್ಲೂಕಿನಲ್ಲಿ ಬುಧವಾರದಿಂದ ಮತ್ತೆ ಜಿಟಿ ಜಿಟಿ ಮಳೆಯಾಗುತ್ತಿದೆ. ಬಿಸಿಲು ಕಾಣದೆ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುತ್ತಿದೆ.
ಕೆಲ ದಿನಗಳ ಮಳೆಯಿಂದಾಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಬೆಳೆ ಹಾನಿಯಾಗಿತ್ತು. ಕೆಲವು ಕಡೆ ಮನೆ ಬಿದ್ದಿದ್ದವು. ಇವಾಗ ಮತ್ತೆ ಮಳೆ ಶುರುವಾಗಿದ್ದು, ಜಿಲ್ಲೆಯ ರೈತರಿಗೆ ಸಂಕಷ್ಟ ಎದುರಾಗಿದೆ.
ಈಗಾಗಲೇ ಬಹುತೇಕ ಹೆಸರು ಮತ್ತು ಉದ್ದು ಬೆಳೆ ಹಾನಿಯಾಗಿದ್ದು, ತೊಗರಿ ಮತ್ತು ಸೋಯಾ ಬೆಳೆ ಅಷ್ಟಕ್ಕಷ್ಟೇ ಉಳಿದುಕೊಂಡಿತ್ತು. ಆದರೆ ಈ ಮಳೆಯಿಂದಾಗಿ ಉಳಿದ ಬೆಳೆಯುವ ಹಾನಿಯಾಗುತ್ತದೆ ಎಂದು ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಇಂದು ಕೂಡ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿದ್ದು, ಜಿಟಿ ಜಿಟಿ ಮಳೆ ಸುರಿಯುತ್ತಿದೆ.
Next Story





