ಬೀದರ್ : ನಾಗಪುರದ ದೀಕ್ಷಾ ಭೂಮಿಗೆ ತೆರಳಲು ರೈಲು ವ್ಯವಸ್ಥೆ ಮಾಡಲು ಮನವಿ

ಬೀದರ್: ಮಹಾರಾಷ್ಟ್ರ ರಾಜ್ಯದ ನಾಗಪುರದ ದೀಕ್ಷಾ ಭೂಮಿಗೆ ಅಶೋಕ್ ವಿಜಯ್ ದಶಮಿ, ಧಮ್ಮ ಚಕ್ರ ಪರಿವರ್ತನ ದಿನಕ್ಕೆ ತೆರಳಲು ರೈಲಿನ ವ್ಯವಸ್ಥೆ ಮಾಡಬೇಕು ಎಂದು ದಲಿತ್ ಯೂನಿಟಿ ಮೂವ್ಮೆಂಟ್ ಸಂಘಟನೆಯಿಂದ ಮನವಿ ಪತ್ರ ಸಲ್ಲಿಸಲಾಗಿದೆ.
ಸೋಮವಾರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಶೋಕ್ ವಿಜಯ್ ದಶಮಿ, ಧಮ್ಮ ಚಕ್ರ ಪರಿವರ್ತನ ದಿನದ ನಿಮಿತ್ಯ ನಾಗಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಉಪಾಸಕ, ಉಪಾಸಕಿಯರು ತೆರಳುತ್ತಾರೆ. ಪ್ರತಿ ವರ್ಷ ರೈಲಿನ ವ್ಯವಸ್ಥೆ ಮಾಡಲಾಗುತಿತ್ತು. ಅದೇ ರೀತಿ ಈ ವರ್ಷವು ಕೂಡ ರೈಲು ವ್ಯವಸ್ಥೆ ಮಾಡಿ ಬೌದ್ಧ ಉಪಾಸಕ, ಉಪಾಸಕಿಯರಿಗೆ ನಾಗಪುರಕ್ಕೆ ತೆರಳಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ದಲಿತ್ ಯೂನಿಟಿ ಮೂವ್ಮೆಂಟ್ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಗೌತಮ್ ಡಾಕುಳಗಿ, ಜಿಲ್ಲಾಧ್ಯಕ್ಷ ವಿನೀತ್ ಗಿರಿ, ಉತ್ತಮ್ ಕೆಂಪೆ ಹಾಗೂ ರಾಜಶೇಖರ್ ಸೇರಿಕಾರ್ ಇದ್ದರು
Next Story





