ಎಸ್ಐಆರ್ | ಬೀದರ್ ಜಿಲ್ಲೆಯಲ್ಲಿ 20,156 ಅರ್ಜಿಗಳ ಸ್ವೀಕಾರ, 22,578 ವಿಚಾರಣೆ ಪೂರ್ಣ

ಸಾಂದರ್ಭಿಕ ಚಿತ್ರ | Photo Credit : PTI
ಎಸ್ಐಆರ್ | ಬೀದರ್ ಜಿಲ್ಲೆಯಲ್ಲಿ 20,156 ಅರ್ಜಿಗಳ ಸ್ವೀಕಾರ, 22,578 ವಿಚಾರಣೆ ಪೂರ್ಣ
ಬೀದರ್: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)–2026ರ ಅಕ್ಟೋಬರ್ 1ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದಿಂದ ಹೊರಡಿಸಲಾದ ವೇಳಾಪಟ್ಟಿಯಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, 2026ರ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಗಸ್ಟ್ 24ರಿಂದ ಸೆಪ್ಟೆಂಬರ್ 22ರವರೆಗೆ ಜಿಲ್ಲೆಯಲ್ಲಿ ಸ್ವೀಕೃತವಾದ ನಮೂನೆ–6, 7 ಮತ್ತು 8ರ ವಿವರಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶರ್ಮಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿಯ ಹಕ್ಕು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಆಗಸ್ಟ್ 24ರಿಂದ ಸೆಪ್ಟೆಂಬರ್ 22ರವರೆಗೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಮೂನೆ–6, 7 ಮತ್ತು 8ರ ಅಡಿಯಲ್ಲಿ ಅರ್ಜಿಗಳು ದಾಖಲಾಗಿವೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ–6ರ ಅಡಿಯಲ್ಲಿ 1,681, ನಮೂನೆ–7ರ ಅಡಿಯಲ್ಲಿ 42 ಹಾಗೂ ನಮೂನೆ–8ರ ಅಡಿಯಲ್ಲಿ 861 ಅರ್ಜಿಗಳು ದಾಖಲಾಗಿವೆ. ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ–6ರ ಅಡಿಯಲ್ಲಿ 2,030, ನಮೂನೆ–7ರಲ್ಲಿ 8 ಹಾಗೂ ನಮೂನೆ–8ರಲ್ಲಿ 1,180 ಅರ್ಜಿಗಳು ದಾಖಲಾಗಿವೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ–6ರಲ್ಲಿ 1,479, ನಮೂನೆ–7ರಲ್ಲಿ 15 ಹಾಗೂ ನಮೂನೆ–8ರಲ್ಲಿ 941 ಅರ್ಜಿಗಳು ದಾಖಲಾಗಿವೆ. ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ–6ರಲ್ಲಿ 2,562, ನಮೂನೆ–7ರಲ್ಲಿ 12 ಹಾಗೂ ನಮೂನೆ–8ರಲ್ಲಿ 1,769 ಅರ್ಜಿಗಳು ದಾಖಲಾಗಿವೆ.
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ–6ರಲ್ಲಿ 1,929, ನಮೂನೆ–7ರಲ್ಲಿ 2,285 ಹಾಗೂ ನಮೂನೆ–8ರಲ್ಲಿ 909 ಅರ್ಜಿಗಳು ದಾಖಲಾಗಿವೆ. ಔರಾದ್ (ಬಿ) ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ–6ರಲ್ಲಿ 1,616, ನಮೂನೆ–7ರಲ್ಲಿ 22 ಹಾಗೂ ನಮೂನೆ–8ರಲ್ಲಿ 815 ಅರ್ಜಿಗಳು ದಾಖಲಾಗಿವೆ.
ಒಟ್ಟಾರೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಮೂನೆ–6ರ ಅಡಿಯಲ್ಲಿ 11,297, ನಮೂನೆ–7ರ ಅಡಿಯಲ್ಲಿ 2,384 ಹಾಗೂ ನಮೂನೆ–8ರ ಅಡಿಯಲ್ಲಿ 6,475 ಅರ್ಜಿಗಳು ದಾಖಲಾಗಿದ್ದು, ಒಟ್ಟು 20,156 ಅರ್ಜಿಗಳು ಸ್ವೀಕೃತವಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಮೂನೆ–7ಕ್ಕೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆಯಡಿ ಬಸವಕಲ್ಯಾಣ ತಾಲೂಕಿನಲ್ಲಿ 3,093 ನೋಟಿಸ್ ಸಿದ್ಧಪಡಿಸಿ 3,097 ನೋಟಿಸ್ ತಲುಪಿಸಲಾಗಿದ್ದು, 1,852 ವಿಚಾರಣೆ ನಡೆಸಲಾಗಿದೆ. ಹುಮನಾಬಾದ್ ತಾಲೂಕಿನಲ್ಲಿ 5,049 ನೋಟಿಸ್ ಸಿದ್ಧಪಡಿಸಿ 5,049 ನೋಟಿಸ್ ತಲುಪಿಸಿ 3,536 ವಿಚಾರಣೆ ಪೂರ್ಣಗೊಳಿಸಲಾಗಿದೆ.
ಬೀದರ್ ದಕ್ಷಿಣ ತಾಲೂಕಿನಲ್ಲಿ 2,459 ನೋಟಿಸ್ ಸಿದ್ಧಪಡಿಸಿ 2,459 ನೋಟಿಸ್ ತಲುಪಿಸಲಾಗಿದ್ದು, 1,684 ವಿಚಾರಣೆ ನಡೆಸಲಾಗಿದೆ. ಬೀದರ್ ತಾಲೂಕಿನಲ್ಲಿ 11,263 ನೋಟಿಸ್ ಸಿದ್ಧಪಡಿಸಿ 11,190 ನೋಟಿಸ್ ತಲುಪಿಸಲಾಗಿದ್ದು, 8,039 ವಿಚಾರಣೆಗಳು ನಡೆದಿವೆ.
ಭಾಲ್ಕಿ ತಾಲೂಕಿನಲ್ಲಿ 5,836 ನೋಟಿಸ್ ಸಿದ್ಧಪಡಿಸಿ 5,739 ನೋಟಿಸ್ ತಲುಪಿಸಲಾಗಿದ್ದು, 3,944 ವಿಚಾರಣೆ ನಡೆಸಲಾಗಿದೆ. ಔರಾದ್ ತಾಲೂಕಿನಲ್ಲಿ 4,968 ನೋಟಿಸ್ ಸಿದ್ಧಪಡಿಸಿ 4,968 ನೋಟಿಸ್ ತಲುಪಿಸಿ 3,523 ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 32,672 ನೋಟಿಸ್ಗಳನ್ನು ಸಿದ್ಧಪಡಿಸಲಾಗಿದ್ದು, 32,502 ನೋಟಿಸ್ಗಳನ್ನು ಸಂಬಂಧಪಟ್ಟವರಿಗೆ ತಲುಪಿಸಲಾಗಿದೆ. ಇದುವರೆಗೆ 22,578 ವಿಚಾರಣೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.






