ಎಸ್‌ಐಆರ್ : ಬೀದರ್ ಜಿಲ್ಲೆಯಲ್ಲಿ 32,666 ನೋಟಿಸ್ ರಚನೆ, 25,244 ವಿಚಾರಣೆ ಪೂರ್ಣ

ಬೀದರ್: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧಿಸಿದಂತೆ ಬೀದರ್ ಜಿಲ್ಲೆಯಲ್ಲಿ ಒಟ್ಟು 32,666 ನೋಟಿಸ್‌ಗಳನ್ನು ರಚಿಸಲಾಗಿದ್ದು, 32,516 ನೋಟಿಸ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ 25,244 ನೋಟಿಸ್‌ಗಳ ವಿಚಾರಣೆ ಪೂರ್ಣಗೊಂಡಿದೆ ಎಂದು ಬೀದರ್ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿಯಲ್ಲಿ ‘ಅನಮೋಲಿ’ ಎಂದು ಗುರುತಿಸಲಾದ, ಅಂದರೆ 2002ರ ಮತದಾರರ ಪಟ್ಟಿಯಲ್ಲಿ ಲಭ್ಯವಿರುವ ಹೆಸರು ಹಾಗೂ ಪ್ರಸ್ತುತ ಮತದಾರರ ಪಟ್ಟಿಯಲ್ಲಿನ ಹೆಸರಿನಲ್ಲಿ ವ್ಯತ್ಯಾಸವಿರುವವರು ಮತ್ತು 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ‘ನೋ ಮ್ಯಾಪಿಂಗ್’ ಮತದಾರರಿಗೆ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಹಂತದಲ್ಲಿಯೇ ಸಂಬಂಧಿಸಿದ ಮತದಾರರನ್ನು ವಿಚಾರಣೆಗೆ ಕರೆದು, ಈಗಾಗಲೇ ಸಾರ್ವಜನಿಕರಿಗೆ ವಿತರಿಸಲಾಗಿರುವ ಜಾತಿ ಪ್ರಮಾಣಪತ್ರ ಹಾಗೂ ಶಾಶ್ವತ ವಾಸಸ್ಥಳ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಮೂಲ ದಾಖಲಾತಿಗಳಾಗಿ ಪರಿಗಣಿಸಿ ನೋಟಿಸ್‌ಗಳ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕ್ಷೇತ್ರವಾರು ವಿವರ :
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 3,093 ನೋಟಿಸ್‌ಗಳನ್ನು ರಚಿಸಲಾಗಿದ್ದು, 3,097 ನೋಟಿಸ್‌ಗಳನ್ನು ವಿತರಿಸಲಾಗಿದೆ. 2,110 ವಿಚಾರಣೆಗಳು ನಡೆದಿವೆ.
ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ 5,049 ನೋಟಿಸ್‌ಗಳನ್ನು ರಚಿಸಿ, ಅಷ್ಟೇ ಸಂಖ್ಯೆಯ ನೋಟಿಸ್‌ಗಳನ್ನು ವಿತರಿಸಲಾಗಿದೆ. 4,327 ವಿಚಾರಣೆಗಳು ನಡೆದಿವೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2,459 ನೋಟಿಸ್‌ಗಳನ್ನು ರಚಿಸಿ, 2,459 ನೋಟಿಸ್‌ಗಳನ್ನು ವಿತರಿಸಲಾಗಿದೆ. 1,811 ವಿಚಾರಣೆಗಳನ್ನು ನಡೆಸಲಾಗಿದೆ.
ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ 11,262 ನೋಟಿಸ್‌ಗಳನ್ನು ರಚಿಸಲಾಗಿದ್ದು, 11,204 ನೋಟಿಸ್‌ಗಳನ್ನು ವಿತರಿಸಲಾಗಿದೆ. 8,930 ವಿಚಾರಣೆಗಳು ನಡೆದಿವೆ.
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 5,835 ನೋಟಿಸ್‌ಗಳನ್ನು ರಚಿಸಿ, 5,739 ನೋಟಿಸ್‌ಗಳನ್ನು ವಿತರಿಸಲಾಗಿದೆ. 4,426 ವಿಚಾರಣೆಗಳು ನಡೆದಿವೆ.
ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ 4,968 ನೋಟಿಸ್‌ಗಳನ್ನು ರಚಿಸಿ, 4,968 ನೋಟಿಸ್‌ಗಳನ್ನು ವಿತರಿಸಲಾಗಿದೆ. 3,640 ವಿಚಾರಣೆಗಳು ನಡೆದಿವೆ.
ಹೀಗೆ ಜಿಲ್ಲೆಯಲ್ಲಿ ಒಟ್ಟು 32,666 ನೋಟಿಸ್‌ಗಳನ್ನು ರಚಿಸಲಾಗಿದ್ದು, 32,516 ನೋಟಿಸ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ 25,244 ನೋಟಿಸ್‌ಗಳ ವಿಚಾರಣೆ ಪೂರ್ಣಗೊಂಡಿದೆ ಎಂದು ಚುನಾವಣಾ ತಹಶೀಲ್ದಾರ್ ತಿಳಿಸಿದ್ದಾರೆ.
ವಿಕಲಚೇತನ ಹಾಗೂ ವಯಸ್ಕ ಮತದಾರರ ಸ್ಥಳಗಳಿಗೆ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ದಾಖಲಾತಿಗಳನ್ನು ಪರಿಶೀಲಿಸುವ ಮೂಲಕ ‘ನೋ ಮ್ಯಾಪಿಂಗ್’ ಮತ್ತು ‘ಅನಮೋಲಿ’ ಮತದಾರರಿಗೆ ನೀಡಿರುವ ನೋಟಿಸ್‌ಗಳ ವಿಲೇವಾರಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.






