ಎಸ್ಐಆರ್ | ಬೀದರ್ ಜಿಲ್ಲೆಯಲ್ಲಿ 32,673 ನೋಟಿಸ್ ವಿತರಣೆ, 30,409 ವಿಚಾರಣೆ ಪೂರ್ಣ

ಬೀದರ್: ಜಿಲ್ಲೆಯಲ್ಲಿ ಒಟ್ಟು 32,673 ನೋಟಿಸ್ಗಳನ್ನು ರಚಿಸಿ ವಿತರಿಸಲಾಗಿದ್ದು, ಈ ಪೈಕಿ 30,409 ವಿಚಾರಣೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 3,097 ನೋಟಿಸ್ಗಳನ್ನು ರಚಿಸಿ, ಅಷ್ಟೂ ನೋಟಿಸ್ಗಳನ್ನು ವಿತರಿಸಲಾಗಿದ್ದು, 2,384 ವಿಚಾರಣೆಗಳನ್ನು ನಡೆಸಲಾಗಿದೆ. ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ 5,049 ನೋಟಿಸ್ಗಳನ್ನು ರಚಿಸಿ ವಿತರಿಸಲಾಗಿದ್ದು, ಎಲ್ಲ 5,049 ವಿಚಾರಣೆಗಳನ್ನು ನಡೆಸಲಾಗಿದೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2,459 ನೋಟಿಸ್ಗಳನ್ನು ರಚಿಸಿ ವಿತರಿಸಲಾಗಿದ್ದು, 2,418 ವಿಚಾರಣೆಗಳನ್ನು ನಡೆಸಲಾಗಿದೆ. ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ 11,264 ನೋಟಿಸ್ಗಳನ್ನು ರಚಿಸಿ ಅಷ್ಟೂ ನೋಟಿಸ್ಗಳನ್ನು ವಿತರಿಸಲಾಗಿದ್ದು, 10,744 ವಿಚಾರಣೆಗಳು ಪೂರ್ಣಗೊಂಡಿವೆ.
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 5,836 ನೋಟಿಸ್ಗಳನ್ನು ರಚಿಸಿ ವಿತರಿಸಲಾಗಿದ್ದು, ಎಲ್ಲ 5,836 ವಿಚಾರಣೆಗಳನ್ನು ನಡೆಸಲಾಗಿದೆ. ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ 4,968 ನೋಟಿಸ್ಗಳನ್ನು ರಚಿಸಿ ವಿತರಿಸಲಾಗಿದೆ. ಈ ಪೈಕಿ 3,978 ವಿಚಾರಣೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 32,673 ನೋಟಿಸ್ಗಳನ್ನು ರಚಿಸಿ ಅಷ್ಟೂ ನೋಟಿಸ್ಗಳನ್ನು ವಿತರಿಸಲಾಗಿದ್ದು, 30,409 ವಿಚಾರಣೆಗಳು ನಡೆದಿವೆ ಎಂದು ಅವರು ತಿಳಿಸಿದ್ದಾರೆ.






