ಬೀದರ್ : ಜಿಲ್ಲಾ ಸೌಹಾರ್ದ ಸಹಕಾರ ಭಾರತಿ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

ಬೀದರ್ : ಜಿಲ್ಲಾ ಸೌಹಾರ್ದ ಸಹಕಾರ ಭಾರತಿ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿಯಮಿತ ಸಂಸ್ಥೆಯ ಸಭಾಂಗಣದಲ್ಲಿ, ಸೌಹಾರ್ದ ಸಹಕಾರಿ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಭುದೇವ್ ಎಮ್.ಆರ್, ರಾಜ್ಯ ಕಾರ್ಯದರ್ಶಿ ವಿಶ್ವನಾಥ್ ಪಾಟೀಲ್ ಹಾಗೂ ರಾಜ್ಯ ನಿರ್ದೇಶಕ ಗುರುನಾಥ ಶಾಂತಿಕರ್ ಸೇರಿದಂತೆ ಅನೇಕ ರಾಜ್ಯ ಆಡಳಿತ ಮಂಡಳಿಯ ಸದಸ್ಯರ ನೇತೃತ್ವದಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಬೀದರ್ ಜಿಲ್ಲಾ ಅಧ್ಯಕ್ಷರಾಗಿ ಶವಬಸಪ್ಪ ಚನ್ನಲ್ಲೆ, ಉಪಾಧ್ಯಕ್ಷರಾಗಿ ಪ್ರಭುದೇವ್ ಹಳ್ಳಿಖೇಡ್, ಜಿಲ್ಲಾ ಕಾರ್ಯದರ್ಶಿಯಾಗಿ ಬಸವರಾಜ್ ಹೊಡಗೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಕಾಂತ್ ಸ್ವಾಮಿ, ಜಿಲ್ಲಾ ಕೋಶ್ಯಾಧ್ಯಕ್ಷರಾಗಿ ಸಂಜಯ್ ಗ್ಯಾಸ್ ಇವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಪ್ರಭುದೇವ್ ಅವರು ಮಾತನಾಡಿ, ಸಹಕಾರ ಭಾರತಿ ಸಂಸ್ಥಾಪಕರಾದ ದಿ. ಲಕ್ಷ್ಮಣರಾವ್ ಇನಾಂದಾರ್ ಅವರ ಸಂಕಲ್ಪದಂತೆ ಬಿನಾ ಸಂಸ್ಕಾರ್ ನಹಿ ಸಹಕಾರ್, ಬಿನಾ ಸಹಕಾರ್ ನಹಿ ಉದ್ಧಾರ್ ಎಂಬ ಸ್ಪಟಿಕ ವಾಣಿಯಾಗಿದ್ದು, ಭಾರತೀಯ ಪ್ರತಿ ಪ್ರಜೆ ಸಹಕಾರ ಮನೋಭಾವ ಹೆಚ್ಚಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಭುಯ್ಯ ಅವರು ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಭುಯ್ಯಾ ಅವರನ್ನು ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಬೊಮ್ಮಗೊಂಡೇಶ್ವರ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ರಾಜಶೇಖರ್ ನಾಗಮೂರ್ತಿ, ಸಹಕಾರ ಭಾರತೀಯ ರಾಜ್ಯ ಆಡಳಿತ ಮಂಡಳಿಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಜಕುಮಾರ್, ಜಗನ್ನಾಥ್ ಕರಂಜಿ, ಉಪಾಧ್ಯಕ್ಷ ಸಂಜುಕುಮಾರ್ ಪಾಟೀಲ್, ನಿರ್ದೇಶಕ ನಾಗಶೆಟ್ಟಿ ಪಾಟೀಲ್, ಡಾ.ಅಣ್ಣಾರಾವ್, ಮಹಾದೇವ್ ಅಷ್ಟುರೆ ಹಾಗೂ ಮಾರುತಿ ವಾಡೆಕರ್ ಸೇರಿದಂತೆ ಇತರರು ಉಪಸ್ಥಿರಿದರು.







