ಬೀದರ್ | ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ ಸಾಧ್ಯತೆ: ಸಾರ್ವಜನಿಕರು ಎಚ್ಚರ ವಹಿಸಲು ಸೂಚನೆ

ಬೀದರ್ : ಕಾರಂಜಾ ಜಲಾಶಯದ ನೀರು ಗರಿಷ್ಠ ಮಟ್ಟ ತಲುಪುವ ಸಂಭವ ಕಂಡು ಬಂದಲ್ಲಿ ತಕ್ಷಣ ಕಾರಂಜಾ ಜಲಾಶಯದ ಗೇಟುಗಳು ತೆರೆದು ಜಲಾಶಯದ ನೀರು ನದಿಗೆ ಬಿಡಲಾಗುವುದು. ಹಾಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಬೀದರ ಕನೀನಿನಿ ಕೆಪಿಸಿ ವಿಭಾಗ ನಂ.1 ದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಂಜಾ ಜಲಾಶಯ ಮೇಲ್ಬಾಗದ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗಿ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವುದರಿಂದ ಜಲಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಜಲಾಶಯದ ಗರಿಷ್ಠ ಮಟ್ಟ ತಲುಪುವ ಸಂಭವ ಕಂಡ ತಕ್ಷಣ ಕಾರಂಜಾ ಜಲಾಶಯದ ಗೇಟ್ ಗಳು ತೆರೆದು ನದಿಗೆ ನೀರು ಬಿಡಲಾಗುವುದು. ಇದರಿಂದಾಗಿ ಸಾರ್ವನಿಕರು ನದಿಯಲ್ಲಿ ಇಳಿಯುವುದು, ಬಟ್ಟೆ ಒಗೆಯುವುದು, ಈಜುವುದು, ದನ ಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Next Story





