ಹುಮನಾಬಾದ್ ತಾಲೂಕಿನಾದ್ಯಂತ ಗಾಳಿ-ಮಳೆ : ಧರೆಗುರುಳಿದ ಗಿಡಗಳು

ಹುಮನಾಬಾದ್ : ಪಟ್ಟಣ ಸೇರಿದಂತೆ ದುಬಲಗುಂಡಿ, ಜಲಸಂಗಿ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ಸೋಮವಾರ ಸಾಯಂಕಾಲ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ಗಾಳಿಯ ರಬಸಕ್ಕೆ ಗಿಡಗಳು ಬೇರು ಸಮೇತ ಉರುಳಿ ರಸ್ತೆಗೆ ಬಿದ್ದಿವೆ.
ದುಬಲಗುಂಡಿ ಗ್ರಾಮದ ಹುಮನಾಬಾದ್-ಭಾಲ್ಕಿ ಮುಖ್ಯ ರಸ್ತೆಯಲ್ಲಿ ಸುಮಾರು ನಾಲ್ಕು ಗಿಡಗಳು ಬೇರು ಸಮೇತ ಉರುಳಿ ರಸ್ತೆ ಮೇಲೆ ಬಿದ್ದಿದ್ದವು. ಪರಿಣಾಮವಾಗಿ ಬೈಕ್ ಗಳು ರಸ್ತೆ ಬಿಟ್ಟು ರಸ್ತೆ ಕೆಳಗಡೆಯಿಂದ ಹೋಗುತ್ತಿರುವುದು ಕಂಡು ಬಂದಿತ್ತು. ಅದೇ ರೀತಿ ದೊಡ್ಡ ವಾಹನಗಳ ಸಂಚಾರಕ್ಕೆ ಕೆಲ ಹೊತ್ತು ಅಡ್ಡಿಯುಂಟಾಯಿತು.
Next Story




