ಮಂಗಳೂರು : ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ʼBUILDX ಕಾರ್ಯಾಗಾರʼ

ಮಂಗಳೂರು : ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಾಲಿಟೆಕ್ನಿಕ್ ಕಂಪ್ಯೂಟರ್ ಸೈನ್ಸ್ ವಿಭಾಗವು ಇತ್ತೀಚೆಗೆ ʼಬಿಲ್ಡ್ಎಕ್ಸ್ ಕಾರ್ಯಾಗಾರʼ(BUILDX WORKSHOP) ಎಂಬ ಶೀರ್ಷಿಕೆಯಡಿ ಎರಡು-ದಿನಗಳ RC ಕಾರುಗಳ ನಿರ್ಮಾಣ ಕಲೆ ಕುರಿತು ಕಾರ್ಯಾಗಾರವನ್ನು ಆಯೋಜಿಸಿತ್ತು.
ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಪ್ರೊ.ಪೃಥ್ವಿರಾಜ್ ಎಂ ಅವರ ಸ್ವಾಗತದೊಂದಿಗೆ ಕಾರ್ಯಾಗಾರವು ಪ್ರಾರಂಭವಾಯಿತು, ಈ ವೇಳೆ ತಾಂತ್ರಿಕ ಶಿಕ್ಷಣದಲ್ಲಿ ಪ್ರಾಯೋಗಿಕ ಕಲಿಕೆಯ ಮಹತ್ವದ ಬಗ್ಗೆ ಅವರು ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅಬ್ದುಲ್ ಖಾದರ್ ಅಫ್ರಾನ್, ಮುಹಮ್ಮದ್ ಹಾಶಿದ್ ಅವರು ಭಾಗವಹಿಸಿದರು. CSE ಪ್ರಥಮ ವರ್ಷದ ವಿದ್ಯಾರ್ಥಿನಿ ರಫಿಯಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಬಿಐಇಎಸ್ ಪ್ರಾಂಶುಪಾಲರಾದ ಡಾ.ಬಿ.ಅಝೀಜ್ ಮುಸ್ತಫಾ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ರೊಬೊಟಿಕ್ಸ್ ನ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಮಾಹಿತಿ ನೀಡಿದ್ದು, ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಆಗ್ರಹಿಸಿದರು.
ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಖತೀಜಾ ಸಮ್ರಿನ್ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಗ್ರಹಿಸಿದರು.
ಕಾರ್ಯಾಗಾರದ ಮೊದಲ ದಿನ ವಿದ್ಯಾರ್ಥಿಗಳಿಗೆ RC ಕಾರನ್ನು ನಿರ್ಮಿಸಲು ಬೇಕಾಗಿರುವ ಮೂಲಭೂತ ಅಂಶಗಳನ್ನು ಪರಿಚಯಿಸಿ ಕೊಡಲಾಗಿದೆ. ಸಂಪನ್ಮೂಲ ವ್ಯಕ್ತಿಗಳು ಪ್ರಾಜೆಕ್ಟ್ ನ ಉದ್ದೇಶಗಳು ಮತ್ತು ಬಿಲ್ಡ್ಎಕ್ಸ್ ಕಿಟ್ ನ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಬಿಲ್ಡ್ ಎಕ್ಸ್ ಕಿಟ್ ಗಳನ್ನು ವಿತರಿಸಲಾಗಿದೆ.
ಕಾರ್ಯಾಗರದಲ್ಲಿ ಮೋಟಾರ್ ಗಳು, ಚಕ್ರಗಳು, ಬ್ಯಾಟರಿ ಪ್ಯಾಕ್ ಗಳು ಮತ್ತು ನಿಯಂತ್ರಣ ಮಾಡ್ಯೂಲ್ ಗಳಂತಹ ಪ್ರತಿಯೊಂದು ಘಟಕದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಗಿತ್ತು.
ಕಾರ್ಯಗಾರದ ಎರಡನೇ ದಿನ RC ಕಾರುಗಳನ್ನು ಪ್ರದರ್ಶಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಆರ್ ಸಿ ಕಾರಿನ ವೈರಿಂಗ್, ಸ್ಥಿರತೆ ಮತ್ತು ನಿಯಂತ್ರಣ ಕುರಿತ ಸಮಸ್ಯೆಗಳನ್ನು ಪತ್ತೆ ಹಚ್ಚಿ ಸರಿಪಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು. RC ಕಾರುಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ತಾವು ಎದುರಿಸದ ಸವಾಲುಗಳನ್ನು ಮತ್ತು ಅನುಭವವನ್ನು ಈ ವೇಳೆ ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.
ಕಾರ್ಯಗಾರದಲ್ಲಿ ಆರ್ ಸಿ ಕಾರು ರೇಸ್ ನ್ನು ಕೂಡ ಆಯೋಜಿಸಲಾಗಿದೆ. ಆರ್ ಸಿ ಕಾರು ರೇಸ್ ನಲ್ಲಿ 10 ತಂಡಗಳು ಭಾಗವಹಿಸಿದ್ದು, ವಿಜೇತರಿಗೆ ಬಹುಮಾನ ಕೂಡ ವಿತರಣೆ ಮಾಡಲಾಗಿದೆ.
ಕಾರ್ಯಾಗಾರದಲ್ಲಿ ವಿವಿಧ ವಿಭಾಗದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿಎಸ್ಇ ಪ್ರಥಮ ವರ್ಷದ ವಿದ್ಯಾರ್ಥಿ ಸಾಹಿಲ್ ರಿಯಾಝ್ ವಂದಿಸಿದರು, ಸಿಎಸ್ಇ ದ್ವಿತೀಯ ವರ್ಷದ ವಿದ್ಯಾರ್ಥಿ ಹಾಶಿಮ್ ಕಾರ್ಯಕ್ರಮವನ್ನು ನಿರೂಪಿಸಿದರು.







