ಪಾಕಿಸ್ತಾನದ ರೇಂಜರ್ ಗಳಿಂದ ಬಂಧಿಸಲ್ಪಟ್ಟ ಬಿಎಸ್ಎಫ್ ಸೈನಿಕ ಭಾರತಕ್ಕೆ ಹಸ್ತಾಂತರ

ಪೂರಣ್ ಕುಮಾರ್ ಶಾ | Photo: x
ಹೊಸದಿಲ್ಲಿ: ಪಾಕಿಸ್ತಾನ ರೇಂಜರ್ಗಳಿಂದ ಏಪ್ರಿಲ್ 23 ರಂದು ಬಂಧಿಸಲ್ಪಟ್ಟ ಬಿಎಸ್ಎಫ್ ಸೈನಿಕನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ.
ಕಳೆದ ತಿಂಗಳು ಅಂತರರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿದ ನಂತರ ಬಿಎಸ್ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕಿಸ್ತಾನ ರೇಂಜರ್ ಗಳು ಬಂಧಿಸಿದ್ದರು. ಬುಧವಾರ ಅಟ್ಟಾರಿಯ ಚೆಕ್ಪೋಸ್ಟ್ ನಲ್ಲಿ ಪಾಕಿಸ್ತಾನ ಸೇನೆಯು ಶಾ ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
Next Story





