IPL LIVE | ಸನ್ ರೈಸರ್ಸ್ ಸೋಲಿಸಿ ಮೂರನೇ ಬಾರಿ ಐಪಿಎಲ್ ಟ್ರೋಫಿ ಗೆದ್ದ ಕೆಕೆಆರ್
ಚೆನ್ನೈನಲ್ಲಿ ನಡೆದ ಫೈನಲ್ ಪಂದ್ಯ ; ಕೆಕೆಆರ್ Vs ಎಸ್ ಆರ್ ಎಚ್

Photo : x@KKRiders
ಚೆನ್ನೈ : ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡವು ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿತು.
Live Updates
- 26 May 2024 10:26 PM IST
ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಕೆಕೆಆರ್.
10.3 ಓವರ್ | ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಕೆಕೆಆರ್.
- 26 May 2024 10:23 PM IST
10 ನೇ ಓವರ್ ಎಸೆದ ಐಡೆನ್ ಮರ್ಕ್ರಮ್. ಅರ್ಧ ಶತಕ ಪೂರೈಸಿದ ವೆಂಕಟೇಶ್ ಅಯ್ಯರ್. ಕೆಕೆಆರ್ 111/2
- 26 May 2024 10:19 PM IST
9ನೇ ಓವರ್ ಎಸೆದ ಶಹಬಾಝ್ ಅಹ್ಮದ್. 8.4 ಓವರ್ಗಳಲ್ಲಿ 100ರ ಗಡಿ ದಾಟಿದ ಕೆಕೆಆರ್. ಡಿಆರ್ಎಸ್ ಮೂಲಕ 8.5 ನೇ ಓವರ್ ಗೆ ಎಲ್ ಬಿ ಡಬ್ಲ್ಯೂ ಆದ ರಹ್ಮತುಲ್ಲಾ ಗುರ್ಬಾಝ್. 2 ನೇ ವಿಕೆಟ್ ಕಳೆದುಕೊಂಡ ಕೆಕೆಆರ್. ಬ್ಯಾಟಿಂಗ್ ಗೆ ಬಂದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್. ಕೆಕೆಆರ್ 106/2
- 26 May 2024 10:03 PM IST
6 ನೇ ಓವರ್ ಎಸೆದು 4,4,6,4, 1,1 ರನ್ ನೀಡಿ ದುಬಾರಿಯಾದ ಹೈದರಾಬಾದ್ ತಂಡದ ತಂಗರಸು ನಟರಾಜನ್. 50 ರನ್ ಗಳ ಜೊತೆಯಾಟ ಮುಗಿಸಿದ ವೆಂಕಟೇಶ್ ಅಯ್ಯರ್ - ರಹ್ಮತುಲ್ಲಾ ಗುರ್ಬಾಝ್. 12 ಎಸೆತಗಳಲ್ಲಿ 40 ರನ್ ಗಳಿಸಿದ ವೆಂಕಟೇಶ್ ಅಯ್ಯರ್. ಮೂರು ಬೌಂಡರಿ ಒಂದು ಸಿಕ್ಸರ್ ಬಾರಿಸಿದ ವೆಂಕಟೇಶ್ ಅಯ್ಯರ್. 20 ರನ್ ಗಳಿಸಿದ ಕೆಕೆಆರ್ 72/1
- 26 May 2024 9:57 PM IST
5 ನೇ ಓವರ್ ಎಸೆದ ಪ್ಯಾಟ್ ಕಮಿನ್ಸ್. 50 ರ ಗಡಿ ದಾಟಿದ ಕೆಕೆಆರ್. 20 ಎಸೆತದಲ್ಲಿ 20 ರನ್ ಗಳಿಸಿದ ರಹ್ಮತುಲ್ಲಾ ಗುರ್ಬಾಝ್. 6 ರನ್ ಖಾತೆಗೆ ಸೇರಿಸಿಕೊಂಡು ಕೆಕೆಆರ್ 52/1
- 26 May 2024 9:39 PM IST
2 ನೇ ಓವರ್ ಮುಕ್ತಾಯ. ಪ್ಯಾಟ್ ಕಮಿನ್ಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಸುನಿಲ್ ನರೇನ್. ಉತ್ತಮ ವಿಕೆಟ್ ಬಲಿ ಪಡೆದ ಪ್ಯಾಟ್ ಕಮಿನ್ಸ್. ಮೊದಲ ಎಸೆತ ಸಿಕ್ಸರ್ ಗೆ ಎತ್ತಿ ಎರಡನೇ ಎಸೆತ ಸಿಕ್ಸರ್ ಗೆ ಎತ್ತುವ ಪ್ರಯತ್ನದಲ್ಲಿ ಶಹಬಾಝ್ ಅಹ್ಮದ್ ಗೆ ಕ್ಯಾಚ್ ನೀಡಿದ ನರೇನ್. ಬ್ಯಾಟಿಂಗ್ ಗೆ ಬಂದ ವೆಂಕಟೇಶ್ ಅಯ್ಯರ್. 12 ರನ್ ಗಳಿಸಿದ ಕೆಕೆಆರ್ 17/1





