ಅಮೆರಿಕದ ಕಾರ್ಡಿನಲ್ ರಾಬರ್ಟ್ ಪ್ರೇವೋಸ್ಟ್ ಹೊಸ ಪೋಪ್: ಹದಿನಾಲ್ಕನೇ ಲಿಯೊ ಎಂಬ ಹೆಸರು ಆಯ್ಕೆ

Photo:x@VaticanNews
ವ್ಯಾಟಿಕನ್ ಸಿಟಿ: ಅಮೆರಿಕದ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೇವೋಸ್ಟ್ ಅವರು ಹೊಸ ಪೋಪ್ ಆಗಿ ಆಯ್ಕೆಯಾಗಿದ್ದಾರೆ. ಅವರು ಪೋಪ್ ಹದಿನಾಲ್ಕನೇ ಲಿಯೊ ಎಂಬ ಹೆಸರನ್ನು ಆಯ್ಕೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಹದಿನಾಲ್ಕನೇ ಲಿಯೊ ಅಮೇರಿಕಾದಿಂದ ಆಯ್ಕೆಯಾದ ಪ್ರಪ್ರಥಮ ಪೋಪ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಸುದೀರ್ಘ ಕಾಲ ಸೇವೆ ಸಲ್ಲಿಸಿದ ಪೆರು ದೇಶದ ಪೌರತ್ವವನ್ನೂ ಪಡೆದಿರುವುದರಿಂದ ಇವರು ಲ್ಯಾಟಿನ್ ಅಮೆರಿಕದಿಂದ ಆಯ್ಕೆಯಾದ ಪೋಪ್ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ
Next Story