LIVE | ಕೇಂದ್ರ ಬಜೆಟ್ 2025: 12 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ

ಹೊಸದಿಲ್ಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಸತತವಾಗಿ ಎಂಟನೇ ಬಾರಿ ಮಂಡಿಸಲಿರುವ ಬಜೆಟ್ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೂರನೇ ಅವಧಿಯಲ್ಲಿ ನಿರ್ಮಲಾ ಅವರು ಮಂಡಿಸಿದ ಎರಡನೇ ಪೂರ್ಣ ಬಜೆಟ್ ಇದಾಗಲಿದೆ. ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವೆಯಾಗಿ ಈವರೆಗೆ ಒಟ್ಟು ಆರು ಬಜೆಟ್ಗಳನ್ನು ಹಾಗೂ ಎರಡು ಮಧ್ಯಂತರ ಬಜೆಟ್ಗಳನ್ನು ಮಂಡಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಬಜೆಟ್ ಸಂಪೂರ್ಣ ಡಿಜಿಟಲ್ ಆಗಲಿದ್ದು, ಈ ಪದ್ಧತಿ ಈ ವರ್ಷವೂ ಮುಂದುವರಿಯಲಿದೆ.
Live Updates
- 1 Feb 2025 11:50 AM IST
ಮುಂದಿನ 10 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಹೊಸ ಸ್ಥಳಗಳಲ್ಲಿ ಪ್ರಾದೇಶಿಕ ವಿಮಾನ ನಿಲ್ದಾಣಗಳು ನಿರ್ಮಾಣ
- 1 Feb 2025 11:45 AM IST
ಭಾರತ್ ಟ್ರೇಡ್ ನೆಟ್ವರ್ಕ್ ಯೋಜನೆ ಮೂಲಕ ಜಾಗತಿಕ ಪೂರೈಕೆ ಸರಪಳಿಯಲ್ಲಿ ದೇಶಿ ಉತ್ಪನ್ನಗಳ ಮಾರಾಟದಲ್ಲಿ ತೊಡಗುವವರಿಗೆ ಹಣಕಾಸು ಕ್ಷೇತ್ರದಲ್ಲಿ ನೆರವು.
Next Story





