ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ರಾಜಸ್ಥಾನದ ಕೋಟಾದಲ್ಲಿ ಮೂವರು ಆರೋಪಿಗಳ ಬಂಧನ

Photo: Free Press Journal
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹರಿಯಾಣದ ಫೂಲ್ ಸಿಂಗ್ ಮತ್ತು ರೆಹಾನ್ ಹಾಗೂ ಬಿಹಾರದ ಹೃತಿಕ್ ಕುಮಾರ್ ಎಂದು ಗುರುತಿಸಲಾಗಿದೆ.
ಮುಂಬೈ ಪೊಲೀಸರಿಂದ ಲಭಿಸಿದ ಮಾಹಿತಿಯ ಮೇರೆಗೆ ರಾಜಸ್ಥಾನದ ಆಂಟಿ-ಗ್ಯಾಂಗ್ಸ್ಟರ್ ಟಾಸ್ಕ್ ಫೋರ್ಸ್ (AGTF) ಮತ್ತು ಕೋಟಾ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಕೋಟಾದ ರೈಲ್ವೆ ಕಾಲೊನಿ ಪ್ರದೇಶದಲ್ಲಿ ಮೂವರನ್ನು ಬಂಧಿಸಲಾಯಿತು.
ಆರೋಪಿಗಳು ಬೆಳಿಗ್ಗೆ 10.15ರ ಸುಮಾರಿಗೆ ಪುಣೆ–ಜೈಪುರ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಕೋಟಾಕ್ಕೆ ಬಂದಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ–ಗುಜರಾತ್ ಗಡಿಯ ವ್ಯಕ್ತಿಯೊಬ್ಬ ಸೇರಿದಂತೆ ಒಟ್ಟು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
Next Story




