ಬಿಡಬ್ಲ್ಯೂಎಫ್, ಬ್ಯಾರಿ ಸಾಹಿತ್ಯ ಅಕಾಡೆಮಿ ನಿಯೋಗದಿಂದ ಸ್ಪೀಕರ್ ಯು ಟಿ ಖಾದರ್ ಭೇಟಿ ; ಸಮಾಲೋಚನಾ ಸಭೆ
ಅಬುಧಾಬಿಯಲ್ಲಿ ವಿಶ್ವ ಬ್ಯಾರಿ ಸಮ್ಮೇಳನ, ಬಿಡಬ್ಲ್ಯೂಎಫ್‌ನ 20 ನೇ ವಾರ್ಷಿಕೋತ್ಸವ

ಮಂಗಳೂರು: ಬಿ ಡಬ್ಲ್ಯೂಎಫ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿಯೋಗ ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್ ಫರೀದ್ ಅವರನ್ನು ಭೇಟಿ ಮಾಡಿತು.
ಈ ವೇಳೆ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಬುಧಾಬಿಯಲ್ಲಿ ಆಯೋಜಿಸಲು ಉದ್ದೇಶಿಸಿರುವ “ವಿಶ್ವ ಬ್ಯಾರಿ ಸಮ್ಮೇಳನ “ಮತ್ತು ಬಿ ಡಬ್ಲ್ಯೂಎಫ್ ನ 20 ನೇ ವಾರ್ಷಿಕೋತ್ಸವವನ್ನು ನಡೆಸುವ ಕುರಿತು ಸ್ಪೀಕರ್ ಯು ಟಿ ಖಾದರ್ ಅವರೊಂದಿಗೆ ಸಮಾಲೋಚನಾ ಸಭೆ ನಡೆಯಿತು
ಸ್ಪೀಕರ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಸಮ್ಮೇಳನದ ಕುರಿತು ನಡೆದ ಈ ಚರ್ಚೆಯಲ್ಲಿ ಸ್ಪೀಕರ್ ಯು ಟಿ ಖಾದರ್ ಅವರು ಈ ಸಮ್ಮೇಳನಕ್ಕೆ ತಮ್ಮ ಸರ್ವವಿಧ ಸಹಕಾರದ ಭರವಸೆ ನೀಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಮಹಮ್ಮದ್ ಅಲಿ ಉಚ್ಚಿಲ್, ರಫೀಕ್ ಕೃಷ್ಣಾಪುರ ,ಹನೀಫ್ ಉಳ್ಳಾಲ್ ಮತ್ತು ನವಾಝ್ ಉಚ್ಚಿಲ್ ಅವರು ನಿಯೋಗದಲ್ಲಿದ್ದರು.
Next Story





