ಚಾಮರಾಜನಗರ: 25 ಕೋತಿಗಳ ಮಾರಣಹೋಮ; ವಿಷಪ್ರಾಶನ ಶಂಕೆ

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಸಾವಿನ ಪ್ರಕರಣದ ಬೆನ್ನ ಹಿಂದೆಯೇ ಇದೀಗ ಕೋತಿಗಳ ಮಾರಣ ಹೋಮ ನಡೆದಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಕೊಡಸೋಗೆ ರಸ್ತೆಯಲ್ಲಿ ರಾಶಿ ರಾಶಿ ವಾನರಗಳ ಕಳೇಬರ ಬಿದ್ದಿವೆ.
ಸುಮಾರು ಇಪ್ಪತ್ತೈದು ಕೋತಿಗಳು ಮೃತಪಟ್ಟಿದ್ದು, ವಿವಿಧೆಡೆಗಳಲ್ಲಿ ಸೆರೆ ಹಿಡಿದ ಕೋತಿಗಳಿಗೆ ವಿಷವಿಕ್ಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಬಫರ್ ವಲಯದ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
ಬದುಕುಳಿದ ಎರಡು ಕೋತಿಗಳು ಸತ್ತ ಕೋತಿಗಳನ್ನು ಎದ್ದೇಳಿಸಲು ಎಳೆದಾಡುತ್ತಿದ್ದ ದೃಶ್ಯ ನೋಡುಗರ ಮನಕಲಕುವಂತಿತ್ತು.
Next Story