ಹನೂರು | ಕಾವೇರಿ ವನ್ಯಜೀವಿಧಾಮದ ಮೇಕೆದಾಟು ಬಳಿ ಚಿರತೆ ಸಾವು

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದ ಬಂಡಳ್ಳಿ ಶಾಖೆಯ ಮೇಕೆದಾಟು ಗಸ್ತಿನ ತಮ್ಮಡಿ ಬಾವಿ ಹಳ್ಳ ಎಂಬ ಅರಣ್ಯ ಪ್ರದೇಶದಲ್ಲಿ ಹೆಣ್ಣು ಚಿರತೆಯೊಂದರ ಕಳೇಬರ ಪತ್ತೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಬಂಡಳ್ಳಿ ಶಾಖೆಯ ಮೇಕೆದಾಟು ಗಸ್ತಿನ ತಮ್ಮಡಿ ಬಾವಿ ಹಳ್ಳ ಎಂಬಲ್ಲಿ ಕಳೆದ ರವಿವಾರ ವಲಯದ ರಕ್ಷಣಾ ಸಿಬ್ಬಂದಿಗಳು ಎಂದಿನಂತೆ ಗಸ್ತು ಕಾರ್ಯ ನಿರ್ವಹಿಸುವಾಗ ಒಂದು ಹೆಣ್ಣು ಚಿರತೆಯ ಕಳೇಬರವನ್ನು ಪತ್ತೆಯಾಗಿದೆ.
ಮೃತ ಹೆಣ್ಣು ಚಿರತೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು, ಮರಣೋತ್ತರ ಪರೀಕಾ ಪ್ರಕ್ರಿಯೆಯಲ್ಲಿ ಮೃತ ಹೆಣ್ಣು ಚಿರತೆಯು ವಯಸ್ಸು 5 ವರ್ಷವಾಗಿದ್ದು, ಮೃತ ಹೆಣ್ಣು ಚಿರತೆಯ ಹಿಂಗಾಲುಗಳ ಪಾರ್ಶ್ವವಾಯುವಿನಿಂದ ಸ್ವಾಧೀನ ಕಳೆದುಕೊಂಡು ಮೃತಪಟ್ಟಿರುತ್ತದೆ ಎಂಬುದಾಗಿ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ಪಶು ವೈದ್ಯರು ಸ್ಥಳದಲ್ಲಿಯೇ ವ್ಯಕ್ತಪಡಿಸಿದ್ದಾರೆ.
ಮೃತ ಹೆಣ್ಣು ಚಿರತೆಯ ಸಾವಿನ ನಿಖರ ಮಾಹಿತಿಗಾಗಿ ಮೃತ ಹೆಣ್ಣು ಚಿರತೆಯ ದೇಹದಿಂದ ಕೆಲವು ಮಾದರಿ ತುಣುಕುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು. ಮರಣೊತ್ತರ ಪರೀಕ್ಷೆಯ ನಂತರ, ಎನ್.ಟಿ.ಸಿ.ಎ ಸದಸ್ಯರನ್ನೊಳಗೊಂಡ ತಂಡದವರ ಸಮ್ಮುಖದಲ್ಲಿ ಹೆಣ್ಣು ಚಿರತೆಯ ಮೃತ ದೇಹವನ್ನು ಬೆಂಕಿಯಿಂದ ದಹಿಸಲಾಯಿತು.





