Chamarajanagara | ಪಿಜಿ ಪಾಳ್ಯದಲ್ಲಿ ಸಫಾರಿ ತೆರಳಿದವರಿಗೆ ಕರಿಚಿರತೆ ದರ್ಶನ !

ಚಾಮರಾಜನಗರ : ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮದ ಪಿಜಿಪಾಳ್ಯ ಸಫಾರಿ ಪ್ರದೇಶದಲ್ಲಿ ಕಪ್ಪು ಚಿರತೆಯೊಂದು ಪ್ರವಾಸಿಗರಿಗೆ ಕಣ್ಣಿಗೆ ಬಿದ್ದಿದೆ.
ಪಿಜಿ ಪಾಳ್ಯ ಸಫಾರಿ ವೇಳೆ ಕಾಡಿನೊಳಗೆ ಓಡಾಡುತ್ತಿದ್ದ ಕರಿ ಚಿರತೆಯನ್ನು ಸಫಾರಿಗೆ ತೆರಳಿದ ಪ್ರವಾಸಿಗರು ಮತ್ತು ಸಿಬ್ಬಂದಿ ಗಮನಿಸಿದ್ದಾರೆ. ಕೆಲಕಾಲ ಓಡಾಡಿದ ಕರಿಚಿರತೆ ಬಳಿಕ ದಟ್ಟ ಅರಣ್ಯದೊಳಗೆ ಓಡಿ ಮರೆಯಾಗಿದೆ.
ಈ ಅಪರೂಪದ ಚಿರತೆಯ ಓಡಾಟದ ದೃಶ್ಯಾವಳಿಯನ್ನು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಈ ಪ್ರದೇಶದಲ್ಲಿ ನಿಗಾವಣೆ ಹೆಚ್ಚಿಸಿದ್ದು, ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.
Next Story




