Chamarajanagar | ಮನೆಗೆ ತೆರಳುತ್ತಿದ್ದ ವೇಳೆ ಮರ ಬಿದ್ದು ಮಹಿಳೆ ಮೃತ್ಯು

ಚಾಮರಾಜನಗರ : ಮನೆಗೆ ತೆರಳುತ್ತಿದ್ದ ಮಹಿಳೆಯ ಮೇಲೆ ಮರವೊಂದು ಮುರಿದು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ-ಯರಗಂಬಳ್ಳಿ ನಡುವೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ-ಯರಗಂಬಳ್ಳಿ ನಡುವೆ ಇದ್ದ ರಸ್ತೆ ಬದಿಯಲ್ಲಿ ಇದ್ದ ಸಾಲು ಮರದಲ್ಲೊಂದು ಮರ ಹಠತ್ತಾಗಿ ಮುರಿದು ಬೀಳುವಾಗ ಅದೇ ಮಾರ್ಗವಾಗಿ ಮನೆಗೆ ತೆರಳುತ್ತಿದ್ದ ಮಹದೇವಮ್ಮ (55) ರವರ ಮೇಳೆ ಬಿದ್ದ ಪರಿಣಾಮ ಮೃತಪಟ್ಟರು.
ಮರ ಮುರಿದು ಬಿದ್ದು ಮಹಿಳೆ ಸಾವಪ್ಪಿದ ಮಾಹಿತಿ ಅರಿತ ಯಳಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪಂಚನಾಮೆ ನಡೆಸಿದರು.
Next Story




