Chamarajanagar | ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದ್ದ ಹುಲಿ ಸರೆ

ಚಾಮರಾಜನಗರ : ಇತ್ತೀಚೆಗೆ ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದ ಹುಲಿಯನ್ನು ಸಾಕಾನೆ ಮೂಲಕ ಸೆರೆ ಹಿಡಿದ ಘಟನೆ ಚಾಮರಾಜನಗರ ತಾಲೂಕಿನ ತಾವಕಟ್ಟೆಮೋಳೆ ಸಮೀಪ ವರದಿಯಾಗಿದೆ.
ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದ ಬಸವಣ್ಣ ಎಂಬವರ ಮೇಲೆ ಹುಲಿ ದಾಳಿ ನಡೆಸಿ ಬಲಿ ತೆಗೆದುಕೊಂಡಿತ್ತು, ಹುಲಿಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಸಾಕಾನೆ ಮೂಲಕ ಪ್ರಯತ್ನಿಸುತ್ತಿದ್ದರು.
ಒಂದೆಡೆ ಹುಲಿ ಸೆರೆಗೆ ಬೋನ್ ಇಟ್ಟರೆ, ಮತ್ತೊಂದೆಡೆ ಹುಲಿ ಹುಡುಕಾಟದಲ್ಲಿ ಸಾಕಾನೆ ಮೂಲಕ ನಿರಂತರ ಪ್ರಯತ್ನ ನಡೆಯುತ್ತಿತ್ತು. ಶನಿವಾರ ಮುಂಜಾನೆ ಸಾಕಾನೆ ಮೂಲಕ ತಾವರೆಕಟ್ಟೆದೋಳೆ ಸಮೀಪ ಕಾರ್ಯಾಚರಣೆ ನಡೆಸುವಾಗ ಕಾಣಿಸಿಕೊಂಡ ಹುಲಿಗೆ ಅರಿವಳಿಕೆ ಸಿಡಿಸಿ ಸೆರೆಹಿಡಿಯಲಾಯಿತು. ಸೆರೆ ಸಿಕ್ಕ ಹುಲಿಯನ್ನು ರಕ್ಷಿಸಲಾಗಿದ್ದು ಪುನವರ್ಸತಿ ಕೇಂದ್ರಕ್ಕೆ ಸಾಗಿಸಲಾಗಿದೆ.
11 ದಿನಗಳ ಸತತ ಕಾರ್ಯಾಚರಣೆ: ಸೆ.14 ರಂದು ಸಂಜೆ ಸಾಣೇಗಾಲ ಗ್ರಾಮದ ಸ.ನಂ.78ರ ಜಮೀನಿನಲ್ಲಿ ಬಡಗಲಪುರ ಗ್ರಾಮದ ರೈತ ಬಸವಣ್ಣ ಎಂಬುವವರು ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ್ದ ಹುಲಿಯು ಬಸವಣ್ಣನನ್ನು ಕೊಂದು ದೇಹದ ಕೆಲ ಭಾಗವನ್ನು ತಿಂದು ಹಾಕಿತ್ತು.




