ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ಮಧ್ಯೆ ಮಗುಚಿದ ಎಳನೀರು ತುಂಬಿದ್ದ ಲಾರಿ; ಚಾಲಕನಿಗೆ ಗಾಯ

ಚಾಮರಾಜನಗರ: ಎಳನೀರು ತುಂಬಿದ್ದ ಲಾರಿಯೊಂದು ಮಗುಚಿ ಬಿದ್ದು, ಚಾಲಕ ಸಣ್ಣ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಕಾರ್ಯಪಾಳ್ಯ ವಾಹನ ತಪಾಸಣಾ ಕೇಂದ್ರದ ಬಳಿ ಕರ್ನಾಟಕ ತಮಿಳುನಾಡು ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತಮಿಳುನಾಡಿನ ಈರೋಡು ಜಿಲ್ಲೆಯ ಸತ್ಯಮಂಗಲಂ ಕಡೆಯಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಎಳನೀರು ತುಂಬಿದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ಲಾರಿಯಿಂದ ಚದುರಿ ಬಿದ್ದಿದ್ದ ಎಳನೀರನ್ನು ಸಾರ್ವಜನಿಕರು ಕೊಂಡೊಯ್ದಿದ್ದಾರೆ.
.ಈ ಅಪಘಾತದ ಕಾರಣ ಸ್ವಲ್ಪ ಸಮಯ ಸಂಚಾರಕ್ಕೆ ತೊಂದರೆಯಾಯಿತು.
Next Story





