Chamarajanagar | ಬೈಕ್ - ಬಸ್ ನಡುವೆ ಮುಖಾಮುಖಿ ಢಿಕ್ಕಿ; ಇಬ್ಬರು ಯುವಕರು ಮೃತ್ಯು

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಮಾರ್ಗದ ಕೋಣನಕೆರೆ ಗ್ರಾಮ ಬಳಿಯ ಮಾಕಳ್ಳಿ ಮಾರಮ್ಮನ ದೇಗುಲದ ತಿರುವಿನಲ್ಲಿ ಮಂಗಳವಾರ ಸಂಜೆ ಬೈಕ್ ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಯುವಕರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಹನೂರು ತಾಲೂಕಿನ ಪೊನ್ನಾಚಿ ಸಮೀಪದ ರಾಮೇಗೌಡನಹಳ್ಳಿಯ ಶಿವಪ್ಪ (21) ಹಾಗೂ ಸತೀಶ್ (24) ಮೃತಪಟ್ಟವರು.
ಸಂಜೆ 5 ರಲ್ಲಿ ಬೈಕ್‍ನಲ್ಲಿ ಗ್ರಾಮಕ್ಕೆ ಹಿಂತಿರುಗುವಾಗ ಕೋಣನಕೆರೆ ಗ್ರಾಮದ ಮಾಕಳ್ಳಿ ಮಾರಮ್ಮನ ದೇಗುಲ ಬಳಿಯ ತಿರುವಿನಲ್ಲಿ ಹೊಗೇನಕಲ್ ಫಾಲ್ಸ್ ನಿಂದ ಎದುರು ಬಂದ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿಷಯ ತಿಳಿದ ರಾಮಾಪುರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.
Next Story





