ಚಾಮರಾಜನಗರ : ಕಾರು-ಆಟೋ ಢಿಕ್ಕಿ; ಮೂವರಿಗೆ ಗಾಯ

ಚಾಮರಾಜನಗರ : ಹನೂರು ತಾಲೂಕಿನ ಮಹದೇಶ್ವರಬೆಟ್ಟ ರಸ್ತೆಯ ತಾಳುಬೆಟ್ಟ–ಕೋಣನಕೆರೆ ಮಾರ್ಗದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಆಟೋ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ.
ಮಹದೇಶ್ವರಬೆಟ್ಟ ಕಡೆಗೆ ತೆರಳುತ್ತಿದ್ದ ಆಟೋ ಎದುರಿನಿಂದ ಬಂದ ಕಾರು ಪರಸ್ಪರ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಮೈಸೂರಿನ ಮಂಡಿಮೊಹಾಲ್ಲಾ ಗ್ರಾಮದ ಯಶಸ್ (12) ಹಾಗೂ ಆಟೋದಲ್ಲಿದ್ದ ಮೈಸೂರಿನ ಕೂರ್ಗಳ್ಳಿಯ ಅರುಣ್ (30) ಮತ್ತು ಪವನ್ ಎಂಬವರಿಗೆ ತೀವ್ರ ಗಾಯಗಳಾಗಿವೆ. ಢಿಕ್ಕಿಯ ತೀವ್ರತೆಗೆ ಆಟೋ ಮತ್ತು ಕಾರು ಎರಡೂ ಸಂಪೂರ್ಣ ಜಖಂಗೊಂಡಿವೆ
Next Story




