ಚಾಮರಾಜನಗರ | ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಸರಕು ಸಾಗಣೆ ವಾಹನ : ಇಬ್ಬರಿಗೆ ಗಾಯ

ಚಾಮರಾಜನಗರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕು ಸಾಗಾಣಿಕೆ ವಾಹನವೊಂದು ಉರುಳಿ ಬಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಕುಳ್ಳೂರು ಕ್ರಾಸ್ ಸಮೀಪ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಕುಳ್ಳೂರು ಕ್ರಾಸ್ ಬಳಿ ಸರಕು ಸಾಗಾಣೆ ವಾಹನ ಸಾಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ವಾಹನ ಉರುಳಿದ ಪರಿಣಾಮ ರಘುಪತಿ ಮತ್ತು ದಾಮೋದರ್ ಎಂಬವರಿಗೆ ಗಾಯವಾಗಿದ್ದು, ಇಬ್ಬರನ್ನು ಚಾಮರಾಜನಗರ ಸರ್ಕಾರಿ ವೈದ್ಯಕೀಯ ಬೋಧನಾ ಆಸ್ಪತ್ರೆಗೆ ದಾಖಲುಮಾಡಲಾಗಿದೆ.
ಕೇರಳ ಮೂಲದ ವಾಹನವಾಗಿದ್ದು, ತಮಿಳುನಾಡಿಗೆ ಸರಕು ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
Next Story