ಚಾಮರಾಜನಗರ : ಹುಲಿ ಸೆರೆಗೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ

ಚಾಮರಾಜನಗರ : ಹುಲಿ ಸೆರೆಗೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶ ಬೇರಂಬಾಡಿ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಾಡಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹುಲಿಯ ಉಪಟಳ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಮತ್ತು ರೈತರ ಒತ್ತಾಯದ ಮೇರೆಗೆ ಬಂಡೀಪುರ ಅರಣ್ಯಾಧಿಕಾರಿಗಳು ಸಿಬ್ಬಂದಿಗಳ ನೆರವಿನೊಂದಿಗೆ ಬೋನು ಇಟ್ಟು ಅದರಲ್ಲಿ ಜೀವಂತ ಮೇಕೆಯನ್ನು ಇರಿಸಿದ್ದರು.
ಆದರೆ ಹುಲಿ ಬೀಳಬೇಕಿದ್ದ ಬೋನಿಗೆ ಚಿರತೆ ಬಿದ್ದಿದೆ. ಸೆರೆ ಸಿಕ್ಕ ಚಿರತೆಯನ್ನು ಬೇರೆಡೆ ಸಾಗಿಸಲಾಗಿದ್ದು, ಹುಲಿ ಸೆರೆಗೆ ಮತ್ತದೇ ಬೋನನ್ನು ಬಳಸಿಕೊಂಡಿದ್ದಾರೆ. ಅದರೆ ಅದರಲ್ಲಿ ಇಟ್ಟಿದ್ದ ಮೇಕೆ ಸಾವನ್ನಪ್ಪಿದೆ.
Next Story





