ಚಾಮರಾಜನಗರ | ಡ್ಯಾಂಗೆ ಬಿದ್ದು ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ
ಚಾಮರಾಜನಗರ : ಕಾಲು ಜಾರಿ ಡ್ಯಾಂಗೆ ಬಿದ್ದು ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲ್ಲಯ್ಯನಪುರದ ಬಳಿ ಚೆಕ್ ಡ್ಯಾಂನಲ್ಲಿ ನಡೆದಿದೆ.
ಮೃತರನ್ನು ಕೌದಳ್ಳಿ ಗ್ರಾಮದ ಸಿದ್ದರಾಮಶೆಟ್ಟಿ(50) ಎಂದು ಗುರುತಿಸಲಾಗಿದೆ.
ಸಿದ್ದರಾಮಶೆಟ್ಟಿ ಬಹಿರ್ದೆಸೆಗೆ ಮಲ್ಲಯ್ಯಪುರದ ಚೆಕ್ ಡ್ಯಾಂ ಬಳಿ ತೆರಳಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಮೃತ ದೇಹವನ್ನು ಹೊರತೆಗೆದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
Next Story





