ಚಾಮರಾಜನಗರ : ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಜಖಂ; ಬೆಳೆ ನಾಶ

ಚಾಮರಾಜನಗರ : ಕರ್ನಾಟಕ ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ನೈತಾಳಪುರ ಗ್ರಾಮದಂಚಿನ ಕೃಷಿ ಜಮೀನಿಗೆ ಕಾಡಾನೆ ನುಗ್ಗಿ, ಬೆಳೆ ನಾಶ ಮಾಡಿದ್ದಲ್ಲದೆ ಟ್ರ್ಯಾಕ್ಟರ್ ಜಖಂಗೊಳಿಸಿದ ಘಟನೆ ನಡೆದಿದೆ.
ನಟರಾಜನ್ ಅವರಿಗೆ ಸೇರಿದ ಕೃಷಿ ಜಮೀನಿಗೆ ಕಾಡಾನೆಯೊಂದು ನುಗ್ಗಿ ಕೃಷಿ ಬೆಳೆಗಳನ್ನು ಹಾನಿಗೊಳಿಸಿದೆ. ಇದನ್ನು ಕಂಡ ರೈತರು ಟ್ರ್ಯಾಕ್ಟರ್ ಮೂಲಕ ಆನೆಯನ್ನು ಓಡಿಸಲು ಪ್ರಯತ್ನಿಸಿದಾಗ, ಕಾಡು ಆನೆ ಆಕ್ರಮಣಕಾರಿಯಾಗಿ ಟ್ರ್ಯಾಕ್ಟರ್ ಗೆ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.
ಈ ಘಟನೆ ರೈತರನ್ನು ಭಯಭೀತಗೊಳಿಸಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸಿ, ಆನೆಗಳು ಕೃಷಿ ಭೂಮಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
Next Story