ಚಾಮರಾಜನಗರ | ಕಾಡಾನೆ ದಾಳಿ; ವ್ಯಕ್ತಿಗೆ ಗಾಯ

ಚಾಮರಾಜನಗರ : ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಕಾಳಿಕಾಂಬ ಕಾಲೋನಿಯಲ್ಲಿ ನಡೆದಿದೆ.
ಕಾಳಿಕಾಂಬ ಕಾಲೋನಿಯ ನಿವಾಸಿ ಮಹದೇವೇಗೌಡ ಎಂಬವರು ಕಾಡಾನೆ ದಾಳಿಗೆ ಒಳಗಾಗಿದ್ದು, ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಳಿಕಾಂಬ ಕಾಲೋನಿಯ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ರಾತ್ರಿ 8 ಸಮಯದಲ್ಲಿ ವಾಪಸ್ಸಾಗುವಾಗ ಎದುರಿಗಿಗೆ ಬಂದ ಕಾಡಾನೆ ದಾಳಿ ನಡೆಸಿತು. ನಂತರ ಕಾಡಾನೆ ಕಾಡಿನೊಳಗೆ ತೆರಳಿತು. ಗಾಯಗೊಂಡ ಮಹದೇವೇಗೌಡರು ಗ್ರಾಮಕ್ಕೆ ಬಂದು ವಿಷಯ ತಿಳಿಸಿದಾಗ, ಗ್ರಾಮಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆ ಚಾಮರಾಜನಗರ ಪೂರ್ವ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Next Story





