Chamarajanagar | ಜಮೀನಿನಲ್ಲಿ ಮಲಗಿದ್ದ ರೈತನ ಮೇಲೆ ಕಾಡಾನೆ ದಾಳಿ; ಆಸ್ಪತ್ರೆಗೆ ದಾಖಲು

ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯ್ತಿಯ ಜಲ್ಲಿಪಾಳ್ಯ ಗ್ರಾಮದ ಜಮೀನಿಗೆ ಬಂದ ಕಾಡಾನೆಯೊಂದು ಮಲಗಿದ್ದ ರೈತನ ಮೇಲೆ ದಾಳಿ ನಡೆಸಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯತಿಯ ಜಲ್ಲಿಪಾಳ್ಯದ ಚಿನ್ನಪ್ಪ ಎಂಬವರೇ ಕಾಡಾನೆ ದಾಳಿಗೆ ಸಿಲುಕಿದ ರೈತನಾಗಿದ್ದು, ಗಾಯಗೊಂಡಿರುವ ಚಿನ್ನಪ್ಪನವರನ್ನು ತಮಿಳುನಾಡಿನ ರಂಗನಾಥ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಚಿನ್ನಪ್ಪರವರ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆಯನ್ನು ಕಾಡಾನೆ ತುಳಿದು ನಾಶ ಮಾಡಿದೆ.
Next Story





