ಚಾಮರಾಜನಗರ ಪ್ರತ್ಯೇಕ ಘಟನೆ: ಎರಡು ಆನೆಗಳ ಸಾವು

ಸಾಂದರ್ಭಿಕ ಚಿತ್ರ | PC : AI
ಚಾಮರಾಜನಗರ: ಜಿಲ್ಲೆಯಲ್ಲಿ ಅಕ್ರಮ ವಿದ್ಯುತ್ ತಂತಿ ಬೇಲಿಗೆ ಆನೆಯೊಂದು ಸಿಲುಕಿ ಬಲಿಯಾಗಿದ್ದರೆ, ಮತ್ತೊಂದೆಡೆ ಕಾದಾಟದಿಂದ ಆನೆಯೊಂದು ಮೃತಪಟ್ಟ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಶಿವಮಲ್ಲುಜಮೀನಿನಲ್ಲಿ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ 20 ವರ್ಷ ಪ್ರಾಯದ ಹೆಣ್ಣಾನೆಯೊಂದು ಶನಿವಾರ ಮುಂಜಾನೆ ಸ್ಥಳದಲ್ಲಿಯೇ ಸಾವಿಗೀಡಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದ ಜಮೀನಿನಲ್ಲಿ ಮೃತ ಕಾಡಾನೆ ಪತ್ತೆಯಾಗಿದೆ. ಜಮೀನು ಮಾಲಕರ ವಿರುದ್ಧ ಕೊಳ್ಳೇಗಾಲ ಬಫರ್ ವಲಯದ ಆರ್ಎಫ್ಒ ರವಿಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆಗೆ ವನ್ಯಜೀವಿ(ಸಂರಕ್ಷಣಾ) ಕಾಯ್ದೆ 1972 ಪ್ರಕಾರ ದೂರು ನೀಡಿದ್ದು, ಪಿಎಸ್ಐ ಡಿ.ಆರ್.ಚೇತನ್ ಕುಮಾರ್ ಎಫ್ ಐ ಆರ್ ದಾಖಲಿಸಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ಎನ್.ರವೀಂದ್ರ ಅವರು ಪ್ರಕರಣ ತನಿಖೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
Next Story




