CHAMARAJANAGARA | ಕಾಡಾನೆ ದಾಳಿಗೆ ಬೈಕ್ ಸವಾರ ಬಲಿ

ಚಾಮರಾಜನಗರ | ಬೈಕ್ ಸವಾರನೋರ್ವನ ಮೇಲೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವಜ್ಯಜೀವಿ ಧಾಮದ ವ್ಯಾಪ್ತಿಯ ಜಲ್ಲಿಪಾಳ್ಯದ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ಮೃತರನ್ನು ತಮಿಳುನಾಡಿನ ಮಾಕನಪಾಳ್ಯ ನಿವಾಸಿ ಶಿವಮೂರ್ತಿ ಎಂದು ಗುರುತಿಸಲಾಗಿದೆ.
ಕೂಲಿ ಕಾರ್ಮಿಕರಾಗಿದ್ದ ಶಿವಮೂರ್ತಿ ಹೂಗ್ಯದಲ್ಲಿ ಕೂಲಿ ಕೆಲಸ ಮುಗಿಸಿ ಬುಧರಾತ್ರಿ ರಾತ್ರಿ ವೇಳೆ ಬೈಕಿನಲ್ಲಿ ಹನೂರು ತಾಲೂಕಿನ ಜಲ್ಲಿಪಾಳ್ಯದ ಮೂಲಕ ತಮಿಳುನಾಡಿನ ಮಾಕನಪಾಳ್ಯಕ್ಕೆ ತರಳುತ್ತಿದ್ದ ದುರ್ಘಟನೆ ನಡೆಸಿದೆ.
ದಾಳಿ ಬಳಿಕ ಇಡೀ ರಾತ್ರಿ ಕಾಡಾನೆ ಹಿಂಡು ಅಲ್ಲೇ ಬೀಡುಬಿಟ್ಟಿತ್ತು
ಇಂದು ಬೆಳಗ್ಗೆ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿರುವಾಗ ಪ್ರಕರಣ ಬೆಳಕಿಗೆ ಬಂದಿದ್ದು, ಜಲ್ಲಿಪಾಳ್ಯ ಕಳ್ಳಬೇಟೆ ಶಿಬಿರದಿಂದ ಎರಡು ಕಿಲೋ ಮೀಟರ್ ಹಾಗೂ ತಮಿಳುನಾಡು ಗಡಿಯಿಂದ 200 ಮೀಟರ್ ಅಂತರದಲ್ಲಿ ಘಟನೆ ನಡೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
Next Story





