Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಚಾಮರಾಜನಗರ
  4. ಜಾತಿ ಕೇಳುವ ಸಮಾಜ ಬೇಡ, ಜ್ಞಾನ ಕೇಳುವ...

ಜಾತಿ ಕೇಳುವ ಸಮಾಜ ಬೇಡ, ಜ್ಞಾನ ಕೇಳುವ ಸಮಾಜ ಬೇಕು : ಸಿಎಂ ಡಿ.ಕೆ.ಶಿವಕುಮಾರ್

ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ

ವಾರ್ತಾಭಾರತಿವಾರ್ತಾಭಾರತಿ25 Oct 2026 7:23 PM IST
share
ಜಾತಿ ಕೇಳುವ ಸಮಾಜ ಬೇಡ, ಜ್ಞಾನ ಕೇಳುವ ಸಮಾಜ ಬೇಕು : ಸಿಎಂ ಡಿ.ಕೆ.ಶಿವಕುಮಾರ್

ಚಾಮರಾಜನಗರ : "ನಮಗೆ ಜಾತಿ ಕೇಳುವ ಸಮಾಜ ಬೇಕಿಲ್ಲ. ಜ್ಞಾನ ಕೇಳುವ ಸಮಾಜ ಬೇಕಾಗಿದೆ. ಬುದ್ಧ ಜ್ಞಾನದ ಸಂಕೇತ, ಅಂಬೇಡ್ಕರ್ ಸಾಮಾಜಿಕ ನ್ಯಾಯದ ಸಂಕೇತ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಎಂಬ ಮೂರು ಜ್ಯೋತಿಗಳು ಬೆಳಗಿದರೆ ಮಾತ್ರ ಭಾರತ ಬೆಳಗಲು ಸಾಧ್ಯ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಚಾಮರಾಜನಗರದಲ್ಲಿ ರವಿವಾರ ನಡೆದ ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದಲ್ಲಿ ಮಾತನಾಡಿದರು.

"ನನಗೆ ಜಾತಿ ಮೇಲೆ ನಂಬಿಕೆಯಿಲ್ಲ. ನೀತಿ ಮೇಲೆ ಮಾತ್ರ ನಂಬಿಕೆಯಿದೆ. ಅಧಿಕಾರ ಜನರ ಸೇವೆಗೋಸ್ಕರ ಇರಬೇಕೆ ಹೊರತು ಒಬ್ಬರಿಗಾಗಿ ಅಲ್ಲ ಎಂದು ಬುದ್ಧ ಗುರು ಹೇಳಿದ್ದಾರೆ. ನಮ್ಮ ಸರ್ಕಾರ ಕೂಡ ಇದೇ ಹಾದಿಯಲ್ಲಿ ನಡೆಯುತ್ತಿದೆ. ಪ್ರಜಾಸೇವೆ ಇಲಾಖೆ ಮೂಲಕ ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ತಲುಪಿಸುತ್ತಿದೆ" ಎಂದರು.

"ದ್ವೇಷವನ್ನು ದೂರ ಇಡಬೇಕು ಎಂದು ಬುದ್ದ ಹೇಳಿದ್ದಾರೆ. ಆದರೆ ಕೆಲವರಿಗೆ ಈ ಡಿ ಕೆ ಶಿವಕುಮಾರ್ ಆಡಳಿತ ನೋಡಿ ಅಸೂಯೆ. ನಮ್ಮ ಸಿದ್ದರಾಮಯ್ಯನವರು ಹೇಳುವಂತೆ ಸುಳ್ಳೆ ಕೆಲವರ ಮನೆ ದೇವರು. ಅಸೂಯೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿಸಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈ ಬುದ್ಧನಲ್ಲಿ, ಈ ಬುದ್ಧನ ವಂಶಸ್ಥರ ಕುಡಿಗಳಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಮತದ ಮುಖಾಂತರ ಅಂತವರಿಗೆ ಉತ್ತರ ಕೊಡಬೇಕು. ದ್ವೇಷ ಅಸೂಯೆಯಿಂದ ಯಾರು ಈ ರಾಜ್ಯದಲ್ಲಿ ರಾಜಕಾರಣ ಮಾಡ್ತಾ ಇದ್ದಾರೆ ಅವರ ಮಾತಿಗೆ ಕೊನೆ ಹಾಡುವ ಶಕ್ತಿ ನಿಮ್ಮಲ್ಲಿದೆ" ಎಂದರು.

ಬೌದ್ಧ ವಿಶ್ವವಿದ್ಯಾಲಯ : ಸಚಿವ ಸಂಪುಟದಲ್ಲಿ ಚರ್ಚೆ

"ಬುದ್ಧನ ಸಂದೇಶ ವಿಶ್ವಕ್ಕೆ ಶಾಂತಿ ಮತ್ತು ಐಕ್ಯತೆಯ ದಾರಿಯನ್ನು ತೋರಿಸಿದೆ. ಎಲ್ಲ ಜೀವಿಗಳೂ ಸುಖವಾಗಿರಲಿ ಎಂಬ ಆಶಯ ಬೌದ್ಧ ಧರ್ಮದ ಮೂಲ ಚಿಂತನೆಯಾಗಿದೆ. ಮಾನವೀಯತೆ ಶ್ರೇಷ್ಠ ಧರ್ಮ, ಪರೋಪಕಾರ ಶ್ರೇಷ್ಠ ಸೇವೆ. ವಿಶ್ವಕ್ಕೆ ಶಾಂತಿಯ ಸಂದೇಶ, ಸಮಾಜಕ್ಕೆ ಸಮಾನತೆಯ ಸಂಕಲ್ಪ ನೀಡುವುದೇ ಬೌದ್ಧ ಧರ್ಮದ ಆಶಯವಾಗಿದೆ" ಎಂದು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ತತ್ವಗಳೇ ಸರ್ಕಾರಕ್ಕೆ ಮಾರ್ಗದರ್ಶನ

"ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳು ಸಮಾಜದ ಪರಿವರ್ತನೆಗೆ ಶಕ್ತಿಯಾಗಿವೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನ ಬದುಕಿಗೆ ಸಂವಿಧಾನ ಮತ್ತು ಮಾನವೀಯ ಮೌಲ್ಯಗಳು ಅಷ್ಟೇ ಮುಖ್ಯ. ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನದ ಅಂತ್ಯದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು ಜಗತ್ತಿನ ಗಮನ ಸೆಳೆದ ಮಹತ್ವದ ಘಟನೆ. ಅವರ ಚಿಂತನೆಗಳು ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗಿವೆ" ಎಂದರು.

ಮುಂದಿನ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ

"ಮುಂದಿನ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಆಯೋಜಿಸಲಾಗುವುದು. ಬೆಳಗಾವಿಯಲ್ಲಿಯೂ ಸಮ್ಮೇಳನ ನಡೆಸುವ ಬಗ್ಗೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ವರ್ಷಕ್ಕೆ ಎರಡು ಸಮ್ಮೇಳನಗಳನ್ನು ನಡೆಸುವುದಕ್ಕೂ ಅಭ್ಯಂತರವಿಲ್ಲ. ಪ್ರತಿಯೊಬ್ಬರ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳಿಗೆ ಗೌರವ ನೀಡುವುದು ಮುಖ್ಯ" ಎಂದರು.

"ಬೌದ್ಧ ವಿಶ್ವವಿದ್ಯಾಲಯ ಕುರಿತು ಬೆಂಗಳೂರಿನಲ್ಲಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು" ಎಂದರು.

ಇದೇ ವೇಳೆ, ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಮ್ಮೇಳನದ ಆಯೋಜಕ ಶಾಸಕ ಎ.ಆರ್. ಕೃಷ್ಣಮೂರ್ತಿ, ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮಿ ಮಾತನಾಡಿದರು.

ಶಾಸಕರಾದ ಎಚ್.ಎಂ.ಗಣೇಶ್ ಪ್ರಸಾದ್, ದರ್ಶನ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕರಾದ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಕಳಲೆ ಕೇಶವಮೂರ್ತಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಎಚ್.ವಿ.ಚಂದ್ರು, ಮುಖಂಡ ವೆಂಕಟರಮಣಸ್ವಾಮಿ, ವಿವಿಧ ಬೌದ್ಧ ಭಿಕ್ಕುಗಳು ಉಪಸ್ಥಿತರಿದ್ದರು.

ನಿರ್ಣಯಗಳು :

(1). ರಾಷ್ಟ್ರಕವಿ ಕುವೆಂಪು ಅವರಿಂದ ರಚಿತವಾದ ನಾಡಗೀತೆಯಲ್ಲಿ ಬೌದ್ಧರುದ್ಯಾನ ಎಂಬ ಪದವನ್ನು ಸೇರಿಸುವುದಕ್ಕೆ ಸಮ್ಮತಿಸಿದ್ದು, ಬರುವ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವ ದಿನದಿಂದಲೇ ಬೌದ್ಧರುದ್ಯಾನ ಪದವನ್ನು ನಾಡಗೀತೆಯಲ್ಲಿ ಸೇರಿಸಿ ಹಾಡುವಂತೆ ಆದೇಶಿಸುವುದು. (2). 1949ರ ಬಿ.ಟಿ ಆ್ಯಕ್ಟ್ ಅನ್ನು ರದ್ದುಪಡಿಸಿ ಬುದ್ಧಗಯಾವನ್ನು ಬೌದ್ಧ ಭಿಕ್ಕುಗಳಿಗೆ ಬಿಟ್ಟುಕೊಡುವಂತೆ ಕೇಂದ್ರ ಸರಕಾರಕ್ಕೆ ಶಿಪಾರಸು ಮಾಡುವುದು. (3). ಕರ್ನಾಟಕ ರಾಜ್ಯದಲ್ಲಿ ಬೌದ್ಧ ಪ್ರಾಧಿಕಾರವನ್ನು ರಚಿಸಿ 500 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವುದು ಮತ್ತು ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಬೌದ್ಧ ಸಮ್ಮೇಳನವನ್ನು ಆಯೋಜಿಸುವುದು. 4). ಕರ್ನಾಟಕ ರಾಜ್ಯದಲ್ಲಿ ಬೌದ್ಧ ಅಧ್ಯಯನ ಅಕಾಡಮಿ ಸ್ಥಾಪಿಸುವುದು. ಚಾಮರಾಜನಗರದಲ್ಲಿರುವ ನಳಂದಾ ವಿಶ್ವವಿದ್ಯಾನಿಲಯವನ್ನು ಅಂತರ್‌ರಾಷ್ಟ್ರೀಯ ಬೌದ್ಧ ವಿಶ್ವವಿದ್ಯಾನಿಲಯವನ್ನಾಗಿ ರೂಪಿಸಲು ವಾರ್ಷಿಕ 5 ಐದು ಕೋಟಿ ರೂ. ಅನುದಾನವನ್ನು ಮಂಜೂರು ಮಾಡುವುದು. (5). ಬೌದ್ಧ ಪೂರ್ಣಿಮೆಯ ದಿನವನ್ನು ಸರಕಾರಿ ರಜೆ ಎಂದು ಘೋಷಿಸಿ ಆದೇಶ ನೀಡುವುದು.

6). ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವೇಗಗತಿಯಲ್ಲಿ ಕಾರ್ಯೋನ್ಮುಖವಾಗಲು ಕ್ರಮ ಕೈಗೊಳ್ಳುವುದು. (7). ಕರ್ನಾಟಕ ರಾಜ್ಯದಲ್ಲಿರುವ ಬೌದ್ಧ ವಿಹಾರಗಳಿಗೆ ಸೂಕ್ತ ಅನುದಾನವನ್ನು ಮಂಜೂರು ಮಾಡಿಕೊಡಲು ಕ್ರಮ ಕೈಗೊಳ್ಳುವುದು. (8). ಭಗವಾನ್ ಬುದ್ಧರ ಉಪದೇಶಗಳನ್ನೊಳಗೊಂಡ ಪಾಲಿ ತ್ರಿಪೀಠಕ ಗ್ರಂಥಗಳ ಕನ್ನಡ ಅನುವಾದ ಮತ್ತು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಇರುವ ಕನ್ನಡ ಸ್ನಾತಕೋತ್ತರ ಪದವಿ ಮತ್ತು ಸ್ನಾತಕಪೂರ್ವ ಕೋರ್ಸ್‌ಗಳಲ್ಲಿ ಕನ್ನಡ ಭಾಷೆಯ ಜೊತೆಗೆ ಪಾಲಿ, ಪ್ರಾಕೃತ ಭಾಷಾ ಅಧ್ಯಯನ ಪಠ್ಯವಾಗಿ ರೂಪಿಸಲು ಕ್ರಮಕೈಗೊಳ್ಳುವುದು. (9). ಸಾಮ್ರಾಟ್ ಅಶೋಕರು ಹಾಕಿಸಿದ ಶಿಲಾಶಾಸನಗಳಿಗೆ ಸೂಕ್ತ ಸಂರಕ್ಷಣೆ ಒದಗಿಸುವುದು. (10). ರಾಜ್ಯದಲ್ಲಿ ನಿರ್ಮಾಣವಾಗಿರುವ ಎಲ್ಲಾ ಬುದ್ಧ ಮತ್ತು ಅಂಬೇಡ್ಕರ್ ಭವನಗಳನ್ನು ಜ್ಞಾನಕೇಂದ್ರಗಳನ್ನಾಗಿ ಮಾಡಿ ಅಲ್ಲಿ ಅತ್ಯುತ್ತಮ ಗುಣಮಟ್ಟದ ಮಾಹಿತಿ ವಿಜ್ಞಾನ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಕ್ರಮವಹಿಸುವುದು.


Tags

CM D.K. Shivakumar
share
ವಾರ್ತಾಭಾರತಿ
ವಾರ್ತಾಭಾರತಿ
Next Story
X