Chamarajanagar| ಕೆಸರಿನಲ್ಲಿ ಸಿಲುಕಿಕೊಂಡ ಕಾಡಾನೆಗಳು

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಉಡುತೊರೆ ಜಲಾಶಯ ಹಿನ್ನೀರಿನಲ್ಲಿ ಮೂರು ಕಾಡಾನೆಗಳು ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಉಡುತೊರೆ ಜಲಾಶಯದ ಹಿನ್ನೀರಿನಲ್ಲಿ ನೀರು ಕುಡಿಯಲು ಬಂದಿದ್ದ ಆನೆಗಳು ಕೆಸರಿನಲ್ಲಿ ಸಿಲುಕಿದ್ದು, ಅವುಗಳಲ್ಲಿ ಒಂದು ಆನೆ ಕಷ್ಟಪಟ್ಟು ಹೊರಬಂದಿದೆ. ಮತ್ತೊಂದು ಆನೆ ಇನ್ನೂ ಕೆಸರಿನಲ್ಲಿ ಸಿಲುಕಿಕೊಂಡಿದ್ದರೆ, ಮೂರನೇ ಆನೆ ಆತಂಕದಿಂದ ಸುತ್ತಮುತ್ತ ಅಲೆದಾಡುತ್ತಿತ್ತು.
ಈ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ಹನೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಆನೆಯನ್ನು ರಕ್ಷಿಸಿದ್ದಾರೆ.
Next Story




