Hanur | ಟಿಬೇಟಿಯನ್ ಕಾಲೋನಿಯಲ್ಲಿ ಶ್ರೀಗಂಧದ ಮರ ಕಳವಿಗೆ ಯತ್ನ : ಪ್ರಕರಣ ದಾಖಲು

ಹನೂರು : ತಾಲೂಕಿನ ಬೈಲೂರು ವನ್ಯಜೀವಿ ವಲಯದ ಮಾವತ್ತೂರು ಎ ಗಸ್ತು ವ್ಯಾಪ್ತಿಯ ಟಿಬೇಟಿಯನ್ ಸೆಟ್ಲಮೆಂಟ್‌ನ ಎಲ್-ವಿಲೇಜ್‌ನಲ್ಲಿ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಅಪರಿಚಿತರು ಗರಗಸದಿಂದ ಕಡಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ನ. 13ರ ಮಧ್ಯರಾತ್ರಿ ಗ್ರಾಮದ ನಿವಾಸಿ ತೆಂಜಿನ್ ಜಂಗ್ ಚುಪ್ ಅವರು ಉಪವಲಯ ಅರಣ್ಯಾಧಿಕಾರಿ ರಾಜೇಶ್ ಎಸ್. ಅವರಿಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಕೂಡಲೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಪರಿಶೀಲಿಸಿದಾಗ, ಶ್ರೀಗಂಧದ ಮರದ ಬುಡವನ್ನು ಗರಗಸದಿಂದ ಕತ್ತರಿಸಿ ಹಲವು ತುಂಡುಗಳಾಗಿ ಮಾಡಿರುವುದು ಕಂಡುಬಂದಿದೆ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಹನೂರು ಪೊಲೀಸ್ ಠಾಣೆಗೆ ತೆರಳಿ, ಶ್ರೀಗಂಧದ ಮರ ಕಳ್ಳತನಕ್ಕೆ ಯತ್ನಿಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




