ಹನೂರು: ಆಗ್ರೋ ಸೆಂಟರ್ ಗೆ ನುಗ್ಗಿದ ಮಳೆ ನೀರು; ಅಪಾರ ನಷ್ಟ

ಚಾಮರಾಜನಗರ: ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಹಿನ್ನಲೆ ಆಗ್ರೋ ಸೆಂಟರ್ ಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಬಿತ್ತನ ಬೀಜ ಸೇರಿ ರಸಗೊಬ್ಬರ ಹಾಗೂ ವಿವಿಧ ಪರಿಕರಗಳು ಹಾನಿಗೊಳಗಾಗಿರುವ ಘಟನೆ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ನಡೆದಿದೆ.
ಶಾಗ್ಯ ಗ್ರಾಮದ ಅನಿಲ್ ಎಂಬುವವರಿಗೆ ಸೇರಿದ ಆಗ್ರೋ ಸೆಂಟರ್ ಗೆ ಮಳೆ ನೀರು ನುಗ್ಗಿದ ಹಿನ್ನಲೆ, ರಸಗೊಬ್ಬರ ನೀರಿನಲ್ಲಿ ಮುಳುಗಡೆಯಾಗಿದ್ದಲ್ಲದೆ ವಿವಿಧ ಪರಿಕರಗಳು ನೀರಿನಲ್ಲಿ ಹಾನಿಯಾಗಿದೆ ಇದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
Next Story





