ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ದಲಿತ ಸಂಘರ್ಷ ಸಮಿತಿ ಸಂಯೋಜಕ ಮೃತ್ಯು

ಚಾಮರಾಜನಗರ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಮೃತಪಟ್ಟ ಘಟನೆ ನಗರದ ಸುಲ್ತಾನ್ ಶರೀಫ್ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಕೆಂಪನಪುರ ಗ್ರಾಮದ ಕೆ.ಎಂ.ನಾಗರಾಜು(60) ಮೃತ ವ್ಯಕ್ತಿ.
ಗುಂಡ್ಲುಪೇಟೆ ರಸ್ತೆ ಕಡೆಯಿಂದ ಕೆ.ಎಂ.ನಾಗರಾಜು ಬೈಕ್ ನಲ್ಲಿ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನ ಮುಂದಿನ ಚಕ್ರ ಬೈಕ್ ಮೇಲೆ ಹರಿದಿದೆ. ಬೈಕ್ ಕೆಳಗೆ ಸಿಲುಕಿಕೊಂಡ ಕೆ.ಎಂ.ನಾಗರಾಜು ತೀವ್ರ ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಡಿವೈಎಸ್ಪಿ ಲಕ್ಷ್ಮಣಯ್ಯ, ಪಟ್ಟಣ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬಸವರಾಜು, ಸಬ್ ಇನ್ಸ್ ಪೆಕ್ಟರ್ ಅಯ್ಯನಗೌಡ, ಸಂಚಾರ ಠಾಣೆ ಸಬ್ ಇನ್ಸ್ ಪೆಕ್ಟರ್ ಹನುಮಂತ ಉಪ್ಪಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





