ಚಾಮರಾಜನಗರ | ಕಾಡಾನೆಯಿಂದ ಪಾರಾಗುವ ಯತ್ನದಲ್ಲಿ ಬಿದ್ದು ರೈತನಿಗೆ ಗಾಯ
ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಅರಣ್ಯ ಸಚಿವರ ಎದುರು ಅಳಲು ತೋಡಿಕೊಂಡ ಸಂತ್ರಸ್ತ

ಚಾಮರಾಜನಗರ: ಕಾಡಾನೆ ದಾಳಿಯಿಂದ ಪಾರಾಗುವ ಯತ್ನದಲ್ಲಿ ರೈತ ನೊಬ್ಬ ಗಾಯಗೊಂಡಿದ್ದು, ರೈತರ ಸಮಸ್ಯೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಬಳಿ ಹೇಳಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದ ಬಸವರಾಜು ಗಾಯಗೊಂಡವರು. ಮಧ್ಯರಾತ್ರಿ ವೇಳೆ ತೋಟದಲ್ಲಿ ಇರುವಾಗ ಕಾಡಾನೆ ಜೋಳ ಮೇಯುತ್ತಿತ್ತು, ಈ ವೇಲೆ ಕಾಡಾನೆ ಓಡಿಸಲು ತೆರಳಿದ ಬಸವರಾಜು ಮೇಲೆ ಕಾಡಾನೆ ದಾಳಿಗೆ ಮುಂದಾಗಿದೆ. ನಡೆಸಲು ಕಾಡಾನೆ ದಾಳಿಯಿಂದ ಪಾರಾಗಲು ಯತ್ನಿಸಿದ ಬಸವರಾಜು ಬಿದ್ದ ಪರಿಣಾಮ ಅವರ ಬಲಗೈಗೆ ಪೆಟ್ಟಾಗಿದೆ.
ಕಾಡಂಚಿನ ಗ್ರಾಮಗಳಲ್ಲಿ ರೈತರು ಕಾಡು ಪ್ರಾಣಿಗಳಿಂದ ಅನುಭವಿಸುತ್ತಿರುವ ತೊಂದರೆಗಳನ್ನು ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ರೈತ ಬಸವರಾಜು ವಿವರಿಸಿದರು. ರೈತರ ಅಳಲನ್ನು ಆಲಿಸಿದ ಸಚಿವರು, ಗಾಯಾಳು ಬಸವರಾಜುರನ್ನು ಆಸ್ಪತ್ರೆಗೆ ದಾಖಲಿಸಲು ಅರಣ್ಯ ಸಿಬ್ಬಂದಿಗೆ ಸೂಚಿಸಿ ಚಿಕಿತ್ಸೆ ಕೊಡಿಸುವಂತೆ ತಿಳಿಸಿದರು.
Next Story







