ಚಾಮರಾಜನಗರ | ಹುಲಿಗಳ ಅಸಹಜ ಸಾವು ಪ್ರಕರಣ; ಐವರು ದನಗಾಹಿಗಳು ವಶಕ್ಕೆ

ಹುಲಿಗಳ ಅಂತ್ಯಕ್ರಿಯೆ
ಚಾಮರಾಜನಗರ : ಐದು ಹುಲಿಗಳ ಸಾವಿಗೆ ಸಂಬಂಧಿಸಿದಂತೆ ಐವರು ದನಗಾಹಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ವಲಯದ ಮೀಣ್ಯಂ ಸಮೀಪ ಗುರುವಾರ ಬೆಳಗ್ಗೆ ಐದು ಹುಲಿಗಳು ಅಸಹಜವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸಮೀಪದ ಗ್ರಾಮವೊಂದರ ಐವರು ದನಗಾಹಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಜಾನುವಾರುಗಳು ಮೇವಿಗಾಗಿ ಕಾಡಿಗೆ ಹೋದಾಗ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಸಾವನ್ನಪ್ಪುತ್ತಿದ್ದವು. ಈ ಬಗ್ಗೆ ದನಗಾಹಿಗಳು ಹಲವಾರು ಭಾರೀ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ನೊಂದಿರುವವರು ಸತ್ತ ಹಸುವಿನ ದೇಹಕ್ಕೆ ವಿಷ ಹಾಕಿದ್ದರು. ಇದೇ ಮಾರ್ಗದಲ್ಲಿ ಬಂದ ಐದು ಹುಲಿಗಳು ಮೃತ ಹಸುವಿನ ಹಿಂಭಾಗ ತಿಂದಿದೆ. ಬಳಿಕ ಹುಲಿಗಳು ಮೃತಪಟ್ಟಿರಬಹುದೆಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
Next Story





